ನ್ಯೂಸ್ ನಾಟೌಟ್: ಮಾಜಿ ಸಚಿವ ಹೆಚ್ಡಿ ರೇವಣ್ಣ ಕಿಡ್ನಾಪ್ ಕೇಸ್ ಬಗ್ಗೆ ಇಂದು(ಮೇ.೮) ವಿಚಾರಣೆ ನಡೆಸಿದ ಕೋರ್ಟ್(HD Revanna) ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ಮಾಡಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್ ಡಿ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಬುದವಾರ ಅವರನ್ನು ಮತ್ತೆ ಜನಪ್ರತಿನಿಧಿ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ರೇವಣ್ಣ ಪರ ವಕೀಲರ ವಾದ ಮತ್ತು ಎಸ್ಐಟಿ ವಾದವನ್ನು ಆಲಿಸಿದ ನ್ಯಾಯಧೀಶ ರವೀಂದ್ರ ಬಿ ಕಟ್ಟಿಮನಿ ರೇವಣ್ಣರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೆಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.