ನ್ಯೂಸ್ ನಾಟೌಟ್: ದೇಶದ ಪ್ರತಿಷ್ಠಿತ ಫ್ಯಾಶನ್ ನೆಟ್ವರ್ಕ್ ಸಂಸ್ಥೆಯ ಮಾಲೀಕನ ಮಗಳು. ಸಿಮೆಂಟ್, ಕೆಮಿಕಲ್, ರಿಟೇಲ್, ಫೈನಾನ್ಶಿಯಲ್ ಸರ್ವೀಸ್ ಸೇರಿದಂತೆ ದೇಶದ ಸಕಲ ಕ್ಷೇತ್ರಗಳಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್ನ ಮುಖ್ಯಸ್ಥ, 2023ರಲ್ಲಿ ದೇಶದ 9ನೇ ಅತ್ಯಂತ ಶ್ರೀಮಂತ ಕುಮಾರ ಮಂಗಲಂ ಬಿರ್ಲಾ ಅವರ ಹಿರಿಯ ಪುತ್ರಿ ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.
ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದು, ‘ಇದು ನನ್ನ ಅತ್ಯಂತ ಕಠಿಣ ನಿರ್ಧಾರ. ನಾನು ನಡೆಸುವ ಮತ್ತು ನಿರ್ಮಿಸುತ್ತಿರುವ ಎರಡೂ ವ್ಯವಹಾರಗಳನ್ನು ಸಮತೋಲನಗೊಳಿಸುವ ಹಂತವನ್ನು ನಾನು ತಲುಪಿದ್ದೇನೆ. ಆದರೆ, ಇನ್ನು ಮುಂದೆ ಸಂಗೀತವು ನನಗೆ ಅಸಾಧ್ಯವಾಗುತ್ತಿದೆ ಮತ್ತು ನಾನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನನ್ನ ಮೇಲೆ ಟೋಲ್ ತೆಗೆದುಕೊಳ್ಳುತ್ತಿದೆ. ಇಷ್ಟು ವರ್ಷಗಳಿಂದ ನಾನು ಬಿಡುಗಡೆ ಮಾಡಿದ ಸಂಗೀತ ಆಲ್ಬಂಗೆ ನೀವು ತೋರಿಸಿದ ಎಲ್ಲಾ ಪ್ರೀತಿಗೆ ಥ್ಯಾಂಕ್ ಯು ಎಂದಷ್ಟೇ ಹೇಳಲು ಸಾಧ್ಯ. ನಮ್ಮದೇ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿರುವುದರಿಂದ ನಮ್ಮದೇ ಜನರು ಮಾಡಿದ ಇಂಗ್ಲಿಷ್ ಸಂಗೀತವನ್ನು ನಾವು ಒಂದು ದಿನ ಮೆಚ್ಚಬಹುದು ಎಂದು ನಾನು ಭಾವಿಸುತ್ತೇನೆ.
ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ ಯು. ಈಗ ನನ್ನೆಲ್ಲಾ ಶಕ್ತಿಯನ್ನು ಬ್ಯುಸಿನೆಸ್ ವರ್ಲ್ಡ್ನಲ್ಲಿ ಹೂಡುವ ಸಮಯ’ ಎಂದು 1.25 ಲಕ್ಷ ಕೋಟಿ ಶ್ರೀಮಂತಿಕೆಯ ಕುಮಾರ ಮಂಗಲಂ ಬಿರ್ಲಾನ ಪುತ್ರಿ ಬರೆದುಕೊಂಡಿದ್ದಾರೆ. ತಂದೆಯ ವಾಣಿಜ್ಯ ಉದ್ಯಮಗಳನ್ನು ನೋಡಿಕೊಳ್ಳುವ ಹಾಗೂ ಅದರ ಬಗ್ಗೆ ಗಮನ ನೀಡುವ ಸಲುವಾಗಿ ತನ್ನ ಇಷ್ಟದ ಸಂಗೀತ ಕ್ಷೇತ್ರವನ್ನು ಬಿಡುತ್ತಿರುವುದಾಗಿ ಅನನ್ಯಾ ಬಿರ್ಲಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಇವರ ನಿರ್ಧಾರವನ್ನು ಕೇಳಿ ಸೆಲ್ರಬಿಟಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಆಕೆಯ ಭವಿಷ್ಯದ ದಿನಗಳು ಉಜ್ವಲವಾಗಿರಲಿ ಎಂದು ಹಲವರು ಹಾರೈಸಿದ್ದಾರೆ. ಅಮೇರಿಕನ್ ರಾಷ್ಟ್ರೀಯ ಟಾಪ್ 40 ಪಾಪ್ ರೇಡಿಯೋ ಶೋ, ಸಿರಿಯಸ್ XM ಹಿಟ್ಸ್ನಲ್ಲಿ ಕಾಣಿಸಿಕೊಂಡರು. ಅನನ್ಯಾ ಬಿರ್ಲಾ ಅವರು 2022 ರಲ್ಲಿ ಅಜಯ್ ದೇವಗನ್ ಅನ್ನು ನಾಯಕರಾಗಿದ್ದ ‘ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್’ ವೆಬ್ ಸರಣಿಯಲ್ಲಿ ನಟಿಸಿದ್ದರು. ಇನಾಮ್ ಮೂಲಕ ವೆಬ್ಸಿರೀಸ್ಗೆ ಹಾಡು ಹಾಡಿದ್ದರು. ಅವರು ಪೋಸ್ಟ್ಗೆ “ಮರೆಯಲಾಗದ ನೆನಪುಗಳು, ಎಲ್ಲಾ ಪ್ರೀತಿಗೆ ಧನ್ಯವಾದಗಳು’ ಎನ್ನುವ ಶೀರ್ಷಿಕೆಯನ್ನೂ ಅವರು ನೀಡಿದ್ದಾರೆ.