ನ್ಯೂಸ್ ನಾಟೌಟ್: ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕೇಸರಿ ದ್ವಜ ಹಾರಾಟದ ಕುರಿತು ಜಟಾಪಟಿ ನಡೆದಿತ್ತು, ಜೊತೆಗೆ ರಾಜಕೀಯ ಕೆಸರೆರಚಾಟಗಳು ನಡೆದಿದ್ದವು. ಈ ಮಧ್ಯೆ ಕೆರಗೋಡು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಡಿಸುವ ಕುರಿತು ಹೋರಾಟ ಮಾಡಿದವರ ಮೇಲೆ ಗೃಹ ಇಲಾಖೆ ರೌಡಿ ಶೀಟರ್ ಕೇಸ್ ಫೈಲ್ ಮಾಡಿದೆ ಎಂದು ವರದಿ ತಿಳಿಸಿದೆ.
ಕೆರಗೋಡಿನಲ್ಲಿ ಹನುಮಧ್ವಜಕ್ಕಾಗಿ ಈ ಮೂವರು ಹೋರಾಟ ನಡೆಸಿದ್ದರು. ಕೆರಗೋಡು ಹನುಮಧ್ವಜ ಹೋರಾಟ ದೇಶಾದ್ಯಂತ ಬಾರೀ ಸುದ್ದಿ ಮಾಡಿತ್ತು. ಹನುಮಧ್ವಜ ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341, 353, 149ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅನ್ಯಕೋಮಿನವರನ್ನು ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿ ಮಾಡಲಾಗಿದೆ. ಧ್ವಜಸ್ತಂಭದಲ್ಲಿ ಹನುಮ ನೆಡಲು ಹೋರಾಟ ನಡೆಸಿದ್ದ ಮೂವರಿಗೆ ಮಂಡ್ಯದ ಕೆರಗೋಡು ಪೊಲೀಸರಿಂದ ರೌಡಿ ಶೀಟರ್ ತೆರೆಯುವ ನೋಟಿಸ್ ಜಾರಿ ಮಾಡಲಾಗಿದೆ. ಬಾಲಕೃಷ್ಣ @ ಚಿಕ್ಕಬಳ್ಳಿ ಬಾಲು, ಕಾರ್ತಿಕ್ ಮತ್ತು ಹರೀಶ್ಗೆ ಈ ಕುರಿತು ನೋಟೀಸ್ ನೀಡಲಾಗಿದೆ. 7 ದಿನಗಳ ಒಳಗೆ ಕೆರಗೋಡು ಪೊಲೀಸ್ ಠಾಣೆಗೆ ಹಾಜರಾಗಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.