ನ್ಯೂಸ್ ನಾಟೌಟ್: ಸಮಾಜವಾದಿ ಪಕ್ಷದ (SP) ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಸೋದರ ಸೊಸೆ ಜಿಹಾದ್ಗಾಗಿ ಮತ ನೀಡಿ ಎಂದು ಕರೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಉತ್ತರಪ್ರದೇಶದ ಫಾರೂಖ್ಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಲ್ಮಾನ್ ಖುರ್ಷಿದ್ ಸೊಸೆ ಮರಿಯಾ ಆಲಂ ಖಾನ್ ಹೀಗಿನ ಪರಿಸ್ಥಿತಿಯಲ್ಲಿ ಜಿಹಾದ್ಗಾಗಿ ವೋಟ್ ಮಾಡಬೇಕಿದೆ ಎಂದು ಹೇಳಿಕೆ ನೀಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮರಿಯಾ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. I.N.D.I.A ಒಕ್ಕೂಟದ ಅಭ್ಯರ್ಥಿ ನಾವಲ್ ಕಿಶೋರ್ ಸಾಕ್ಯ ಪರ ಫಾರೂಖ್ಬಾದ್ನಲ್ಲಿ ಪ್ರಚಾರ ಕೈಗೊಂಡಿದ್ದ ಮರಿಯಾ ಮಾತಿನ ಭರದಲ್ಲಿ ಜಿಹಾದ್ಗಾಗಿ ಮತ ನೀಡಿ. ಬಿಜೆಪಿ ಸರ್ಕಾರದ ಆಡಳಿತದಿಂದ ಅಲ್ಪ ಸಂಖ್ಯಾತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಜಿಹಾದ್ನ ಅವಶ್ಯಕತೆ ಇದೆ. ಹೀಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಜಿಹಾದ್ಗಾಗಿ ಮತ ನೀಡೋಣ. ಯಾವುದೇ ಆಮೀಷ, ಭಾವನೆಗಳಿಗೆ ಬಲಿಯಾಗದೇ ಮತ ನೀಡೋಣ.
ಈ ʼಸಂಘಿʼ ಸರ್ಕಾರವನ್ನು ಕೆಳಗಿಳಿಸಲು ಜಿಹಾದಿಯಿಂದ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಈ ಸಂಘಿ ಸರ್ಕಾರ ನಮ್ಮ ಅಸ್ತಿತ್ವವನ್ನೇ ನಾಶ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದರು. ಇನ್ನು ಮರಿಯಾ ನೀಡಿರುವ ಈ ಹೇಳಿಕೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಯಾ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ರ್ಯಾಲಿಯಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖುರ್ಷಿದ್ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಘಟನೆ ಬಗ್ಗೆ ಸಲ್ಮಾನ್ ಖುರ್ಷಿದ್ ಸ್ಪಷ್ಟನೆ ನೀಡಿದ್ದು, ಜಿಹಾದ್ ಅಂದರೆ ಪ್ರತಿಕೂಲ ಪರಿಸ್ಥಿತಿ ವಿರುದ್ಧ ಹೋರಾಡುವುದು. ಜನರ ಸಾಂವಿಧಾನಿಕ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಆಕೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.