ನ್ಯೂಸ್ ನಾಟೌಟ್: ಅಮೆರಿಕದ ವಿವಿಧ ಕ್ಯಾಂಪಸ್ಗಳಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿವೆ. ಈ ಮಧ್ಯೆ ಇದಕ್ಕೆ ವಿರುದ್ಧವಾಗಿ ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UCLA) ಇಸ್ರೇಲ್ ಬೆಂಬಲಿಗರು ಮತ್ತು ಇಸ್ರೇಲ್ ನ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಯಲ್ಲಿ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ (Jai Shri Ram) ಕೂಗಿದ್ದಾರೆ.
ವಾರಾಂತ್ಯದಲ್ಲಿ ಯುಸಿಎಲ್ಎಯಲ್ಲಿ ಪ್ಯಾಲೆಸ್ತೀನ್ ಪರ ಮತ್ತು ಇಸ್ರೇಲ್ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿದ್ದವು. ಈ ಗೊಂದಲದ ಮಧ್ಯೆ ಅಮೆರಿಕದ ರಾಷ್ಟ್ರೀಯವಾದಿಯೊಬ್ಬರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಈ ಘೋಷಣೆಯನ್ನು ಭಾರತದಲ್ಲಿ ಹಿಂದುಗಳಿಗೆ ಸಂಬಂಧಿಸಿದ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಕೂಗಲಾಗುತ್ತದೆ. ಭಗವಾನ್ ರಾಮನಿಗೆ ಸಂಬಂಧಿಸಿದ ಈ ಘೋಷಣೆಯನ್ನು ಭಾರತ-ವಿರೋಧಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿದಲ್ಲಿ ಬಳಸಲ್ಪಟ್ಟಿದ್ದು ವಿಶೇಷ ಎನ್ನಲಾಗಿದೆ.