ನ್ಯೂಸ್ ನಾಟೌಟ್: ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆದರೆ ಇಲ್ಲಿಬ್ಬರು ಸಹೋದರರು ಈ ಮಾತನ್ನು ಸುಳ್ಳಾಗಿಸಿದ್ದಾರೆ. ಮಾತ್ರವಲ್ಲ ಸಾವಿನಲ್ಲೂ ಒಂದಾಗಿದ್ದಾರೆ.
ಅರಂತೋಡು ಗ್ರಾಮದ ಎಸ್ ಇ ಅಬ್ದುಲ್ಲಾ (೮೨ ವರ್ಷ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಈ ವಿಚಾರ ತಿಳಿದ ಕೂಡಲೇ ಅವರ ಸಹೋದರ ಮಹಮ್ಮದ್ ಎಸ್ ಇ ಕೂಡ ಕುಸಿದು ಬಿದ್ದು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.