ನ್ಯೂಸ್ ನಾಟೌಟ್: ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಥಟ್ ಅಂತ ಹೇಳಿ’ ಅಚ್ಚ ಕನ್ನಡದ ಸುಂದರ ಸುಮಧುರ ‘ಕ್ವಿಝ್’ ನಲ್ಲಿ ಸುಳ್ಯದ ವೈದ್ಯೆ ಡಾ | ವೀಣಾ ಬರೆದ ಪುಸ್ತಕ ಪರಿಚಯವನ್ನು ಖ್ಯಾತ ನಿರೂಪಕ ಡಾ. ನ. ಸೋಮೇಶ್ವರ್ ನಡೆಸಿಕೊಟ್ಟಿದ್ದಾರೆ. ‘ಪ್ರಕೃತಿಯ ಅದ್ಭುತ ಸೃಷ್ಟಿ ಸ್ತ್ರೀ’ ಅನ್ನುವುದರ ಬಗ್ಗೆ ಡಾ | ವೀಣಾ ಬರೆದಿರುವ ಪುಸ್ತಕ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿತ್ತು.
ಹೆಣ್ಣು ಮಕ್ಕಳ ದೇಹದ ಬಗೆಗಿನ ಪರಿಚಯವನ್ನು ಪುಸ್ತಕದಲ್ಲಿ ಸಮಗ್ರವಾಗಿ ಸರಳವಾಗಿ ವಿವರಿಸಲಾಗಿದೆ. ಹೆಣ್ಣು ಮಕ್ಕಳ ಗರ್ಭಕೋಶದಲ್ಲಿ ಬೆಳೆಯುವ ಗೆಡ್ಡೆ, ಋತು ಸ್ರಾವ ಸೇರಿದಂತೆ ಹಲವು ಸಮಸ್ಯೆಗಳ ಸುತ್ತಲಿನ ವಿಚಾರದ ಬಗೆಗಿನ ಕುತೂಹಲಕಾರಿ ಅಂಶಗಳತ್ತ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ಈ ಬಗ್ಗೆ ವಾಹಿನಿಯಲ್ಲಿ ಮಾತನಾಡಿರುವ ಡಾ. ನ. ಸೋಮೇಶ್ವರ್ ಅವರು, ‘ಡಾ| ವೀಣಾ ಅವರು ಸರಳವಾಗಿ ಬರೆಯುತ್ತಾರೆ. ಕ್ಲಿಷ್ಟಕರ ಬರೆವಣಿಗೆಯನ್ನು ಇಡೀ ಪುಸ್ತಕದಲ್ಲಿ ಎಲ್ಲೂ ತಂದಿಲ್ಲ. ಹಳ್ಳಿಯಲ್ಲಿರುವವರಿಗೂ ಅರ್ಥವಾಗುವ ಹಾಗೆ ಪುಸ್ತಕದಲ್ಲಿ ಬರವಣಿಗೆ ಇದೆ. ಇದು ಆನ್ ಲೈನ್ ನಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲ ಮಾಹಿತಿ ಸಿಗಬಹುದು. ಆದರೆ ಅಲ್ಲಿ ಸಿಗುವ ಮಾಹಿತಿಯಲ್ಲಿ ಸಂತೃಪ್ತಿ ಸಿಗುವುದಕ್ಕೆ ಸಾಧ್ಯವಿಲ್ಲ. ಆದರೆ ಡಾ | ವೀಣಾ ಅವರ ಪುಸ್ತಕದಲ್ಲಿ ಸಮಗ್ರ ಮಾಹಿತಿ ಇದೆ ಎಂದು ತಿಳಿಸಿದರು. ಈ ಪುಸ್ತಕ ಮಾರುಕಟ್ಟೆಯಲ್ಲೂ ಲಭ್ಯವಿದೆ. ಆಸಕ್ತರು ವ್ಯಕ್ತಿಗತವಾಗಿ ಡಾ | ವೀಣಾ ಅವರನ್ನು ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಅವರ ಕ್ಲಿನಿಕ್ ನಲ್ಲಿ ಸಂಪರ್ಕಿಸಿಯೂ ಪಡೆದುಕೊಳ್ಳಬಹುದಾಗಿದೆ.