ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆದಿದೆ. ಗ್ರಾಮೀಣ ಭಾಗದಲ್ಲಿ ಹಲವಾರು ಮಂದಿ ಮತದಾನ ಮಾಡುವುದಕ್ಕೆ ಉತ್ಸಾಹದಿಂದ ಮುಂದೆ ಬಂದಿದ್ದರೆ ನಗರ ಪ್ರದೇಶದಲ್ಲಿ ಮಾತ್ರ ಅದ್ಯಾಕೋ ಏನೋ ಜನರು ಮತ ಹಾಕುವುದರಿಂದ ತುಸು ದೂರ ಉಳಿದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲವರು ‘ಮತದಾನ ಮಾಡದವರು ಬದುಕಿದ್ದೂ ಸತ್ತಂತೆ, ಸತ್ತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿ’ ಎಂದು ರಸ್ತೆಯ ಬದಿ ಬ್ಯಾನರ್ ಅಳವಡಿಕೆ ಮಾಡಿ ಛೀಮಾರಿ ಹಾಕಿದ್ದಾರೆ.
ಪ್ರತಿ ಸಲದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ವಲಸಿಗರು ಕೈ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮತದಾನ ಮಾಡುವ ಹಕ್ಕಿದ್ದರೂ ಮತ ಹಾಕಿಲ್ಲ. ಇವರು ಬದುಕಿದ್ದು ಸತ್ತಂತೆ” ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಮುಂದುವರೆದಿದೆ. ಮತದಾನ ಪ್ರಮಾಣ ನಿರೀಕ್ಷೆಯಂತೆ ಕಡಿಮೆ ಪ್ರಮಾಣದಲ್ಲಾಗಿದೆ. ಬೇರೆ ಕಡೆಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತಚಲಾಯಿಸಿದ್ದಾರೆ.