ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಗ್ರಾಮದಲ್ಲಿ ಶೇ. 100ರಷ್ಟು ಮತದಾನ ನಡೆದಿದೆ. ಈ ಮೂಲಕ ಈ ಗ್ರಾಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ನಗರ ಪ್ರದೇಶದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ಮತದಾನ ಕುಂಠಿತವಾಗಿದೆ. ರಜೆ ಇರುವುದರಿಂದ ಮತದಾನದ ಕಡೆಗೆ ಬರೋದನ್ನು ತಪ್ಪಿಸಿಕೊಂಡು ಕುಟುಂಬ ಸಮೇತ ಟ್ರಿಪ್ ಹೋಗುವುದರತ್ತಲೇ ಜನ ಹೆಚ್ಚು ಗಮನವಹಿಸಿರುವುದರಿಂದ ಒಂದಷ್ಟು ಮಂದಿ ಮತದಾನವನ್ನು ತಪ್ಪಿಸಿಕೊಂಡಿದ್ದಾರೆ. ಶೇಕಡಾ 100ರಷ್ಟು ಮತದಾನ ಮಾಡದವರಿಗೆ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಕುಗ್ರಾಮದ ಮತದಾರರು ಸೆಡ್ಡು ಹೊಡೆದಿದ್ದಾರೆ. 111 ಮತದಾರರಿಂದಲೂ ಹಕ್ಕು ಚಲಾವಣೆ ಮಾಡುವ ಮೂಲ ಗ್ರಾಮಸ್ಥರು ಮಾದರಿಯಾಗಿದ್ದಾರೆ.