ನ್ಯೂಸ್ ನಾಟೌಟ್: ಯೆಮನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ಮಹಿಳೆ ನಿಮಿಷ ಪ್ರಿಯಾ ಎಂಬಾಕೆಯನ್ನು 11 ವರ್ಷಗಳ ಬಳಿಕ ಭೇಟಿಯಾಗುವ ಅವಕಾಶ ಅವರ ತಾಯಿ ಪ್ರೇಮ ಕುಮಾರಿಗೆ ದೊರೆತಿದೆ. 2017ರಲ್ಲಿ ತಲಾಲ್ ಅಬ್ದೋ ಮಹ್ದಿ ಎಂಬ ಯೆಮನಿ ಪ್ರಜೆಯನ್ನು ಕೊಂದಿದ್ದಕ್ಕಾಗಿ ಪ್ರಿಯಾರನ್ನು ನ್ಯಾಯಾಲಯ ಗಲ್ಲು ಶಿಕ್ಷೆಗೆ ಗುರಿಪಡಿಸಿತ್ತು.
ಆದರೆ ಹಲವು ಒತ್ತಡಗಳ ಕಾರಣದಿಂದಾಗಿ ಮತ್ತು ಮೇಲ್ಮನವಿಯ ಕಾರಣದಿಂದ ಜೈಲಿನಲ್ಲೇ ಇಷ್ಟು ಸಮಯ ಶಿಕ್ಷೆಯನ್ನು ಮುಂದೂಡಿ ಜೈಲಿನಲ್ಲಿದ್ದರು. ಆಕೆಯ ತಾಯಿ ಪ್ರೇಮ ಕುಮಾರಿ ಮಗಳನ್ನು ನೋಡದೆ 11 ವರ್ಷಗಳೇ ಕಳೆದುಹೋಗಿದ್ದವು. ಇದೀಗ ಸೇವ್ ಪ್ರಿಯಾ ಅಂತಾರಾಷ್ಟ್ರೀಯ ಮಂಡಳಿ ವತಿಯಿಂದ ಪ್ರೇಮಾ ಯೆಮನ್ ಜೈಲಿಗೆ ತೆರಳಿ ಮಗಳನ್ನು ಭೇಟಿ ಯಾಗಿದ್ದಾರೆ. “ಮಗಳು ಓಡಿ ಬಂದು ನನ್ನನ್ನು ಅಪ್ಪಿ ಕಣ್ಣೀರಾದಳು’ ಎಂದಿದ್ದಾರೆ ತಾಯಿ. ದೂರದ ರಾಷ್ಟ್ರದ ಜೈಲಿನಲ್ಲೇ ನಡೆದ ಈ ತಾಯಿ-ಮಗಳ ಪುನರ್ಮಿಲನ ಎಲ್ಲರನ್ನೂ ಭಾವುಕರನ್ನಾಗಿಸಿದೆ.