ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಜನರು ಉದ್ಯೋಗಕ್ಕಾಗಿ ಹೆಚ್ಚು ವಿವಿಧ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಊರಿನಲ್ಲಿಯೇ ಸ್ವ ಉದ್ಯೋಗ ಮಾಡುವುದರ ಮೂಲಕ ಅತ್ಯುತ್ತಮ ಬದುಕು ಕಟ್ಟಿಕೊಳ್ಳಬಹುದು ಅನ್ನುವ ಸಂದೇಶವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ(BSW) ಸಾಬೀತುಪಡಿಸಿದೆ.
ಕಳೆದ ವರ್ಷ ಸುಳ್ಯ ತಾಲೂಕಿನ ಅರಂತೋಡಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಅಲ್ಲಿ ಪ್ಯಾಷನ್ ಡಿಸೈನ್, ಕಶಿಕಟ್ಟುವಿಕೆ, ಅಡುಗೆ ತಯಾರಿ ಮಾಡುವುದರ ಬಗ್ಗೆ ನುರಿತ ತರಬೇತುದಾರರಿಗೆ ತರಬೇತಿಗಳನ್ನು ನೀಡಲಾಗಿತ್ತು. ಇದೀಗ ಈ ಯೋಜನೆ ಸಫಲಗೊಂಡಿದ್ದು ಹಲವಾರು ಮಂದಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತೆ ಆಗಿದೆ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಳಿಕ ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.
ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು BSW ವತಿಯಿಂದ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಈ ಬಾರಿಯ ಶಿಬಿರವನ್ನು ‘ಸ್ವಾಲಂಬನೆಯೆಡೆಗೆ ಒಂದು ಹೆಜ್ಜೆ ಭಾಗ – 2’ ಎಂಬ ಶೀರ್ಷಿಕೆಯಡಿಯಲ್ಲಿ ಪೆರಾಜೆ ಗ್ರಾಮದ ಕುಂಬಳಚೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದೇ ಬರುವ ಮೇ 6 ರಿಂದ 8ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷಕ್ಕಿಂತಲೂ ಇನ್ಮು ಭಿನ್ನವಾಗಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ವಿಶೇಷ. ಹಾಗಾಗಿ ಪೆರಾಜೆ ಭಾಗದ ಹಾಗೂ ಅಕ್ಕ ಪಕ್ಕದ ಊರಿನ ಜನರಿಗೆ ಇನ್ನೊಂದು ಸುವರ್ಣ ಅವಕಾಶವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಬೇಸಿಕ್ ಬ್ಯೂಟಿಷಿಯನ್ ಮತ್ತು ಕರಕುಶಲ ವಸ್ತು ತಯಾರಿಕೆ, ಸಿಂಪಲ್ ಮೇಕಪ್, ವಿಭಿನ್ನ ರೀತಿಯ ಸಾರಿ ತುಡುಗೆ, ಪಿಲ್ಲೋ ಕವರ್ , ಹೇರ್ ಸ್ಟೈಲ್, ಮ್ಯಾಟ್ ತಯಾರಿಕೆ, ಕೃತಕ ಆಭರಣ ತಯಾರಿ, ಐಬ್ರೋಸ್, ಬ್ಯಾಗ್ ತಯಾರಿಕೆ ಕೃಷಿ ಉತ್ಪನ್ನ ಮೌಲ್ಯವರ್ಧನೆ ಮಾಹಿತಿ, ಕಸಿ ಕಟ್ಟುವಿಕೆ ಹಾಗೂ ಸಾವಯವ ಗೊಬ್ಬರ ತಯಾರಿ, ಕೊಕ್ಕೋ, ಹಲಸು, ಮಾವು, ಬಾಳೆ ಬೆಳೆಗಳ ಮೌಲ್ಯವರ್ಧನೆ ಕೊಕ್ಕೋ, ಮಾವು, ಹೋವಿನ ಗಿಡಗಳ ಕಸಿ ಕಟ್ಟುವಿಕೆ, ಎರೆಹುಳ ಕಾಂಪೋಸ್ಟ್, ಜೀವಾಮೃತ ತಯಾರಿಕೆ.