ಬಂಟ್ವಾಳ: ಸಕಲ ಸರಕಾರಿ ಗೌರವಗಳೊಂದಿಗೆ ರಾಷ್ಟ್ರ ಪಕ್ಷಿ ನವಿಲಿನ ಅಂತ್ಯ ಸಂಸ್ಕಾರ ನಡೆದಿರುವ ಘಟನೆ ಬಂಟ್ವಾಳದಿಂದ ವರದಿಯಾಗಿದೆ.
ರಸ್ತೆಯ ಮಧ್ಯೆ ನವಿಲೊಂದರ ಮೃತದೇಹ ಪತ್ತೆಯಾಗಿತ್ತು, ವಿದ್ಯುತ್ ಶಾಕ್ ಹೊಡೆದು ನವಿಲು ಮೃತಪಟ್ಟಿರುವುದಾಗಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕಿ ಸ್ಮಿತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನವಿಲಿನ ಮೃತದೇಹವನ್ನು ಇಲಾಖೆ ನಿಯಮಾವಳಿಯಂತೆ ದಹನ ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.