ನ್ಯೂಸ್ ನಾಟೌಟ್: ಮದುವೆ ಉಡುಗೊರೆಗೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಮೃತನಾದ ಚಂದ್ರಪ್ರಕಾಶ್ (35) ನನ್ನು ಪತ್ನಿ ಚಾಬಿ ತನ್ನ ಸಹೋದರರ ಸಹಾಯದಿಂದ ಕೊಲೆ ಮಾಡಿದ್ದಾಳೆ.ಎನ್ನಲಾಗಿದೆ ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.
ಚಂದ್ರಪ್ರಕಾಶ್ ನ ಸಹೋದರಿಗೆ ಮದುವೆ ನಿಗದಿಯಾಗಿತ್ತು. ಅಂತೆಯೇ ಏಪ್ರಿಲ್ 26 ರಂದು ಮದುವೆ ಕಾರ್ಯಕ್ರಮ ನಡೆಯುವುದಿತ್ತು. ಹೀಗಾಗಿ ಸಹೋದರಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದು ಯೋಚಿಸುತ್ತಿರುವಾಗ ಚಂದ್ರಶೇಖರ್ಗೆ ಚಿನ್ನದ ಉಂಗುರ ಮತ್ತು ಟಿವಿ ಕೊಡಿಸುವ ಯೋಚನೆ ಬಂತು. ಅಂತೆಯೇ ಈ ವಿಚಾರವನ್ನು ಪತ್ನಿಯ ಮುಂದೆ ಪ್ರಸ್ತಾಪಿಸಿದ್ದಾನೆ. ಈ ವೇಳೆ ಪತಿಯ ನಿರ್ಧಾರಕ್ಕೆ ಪತ್ನಿ ಚಾಬಿ ವಿರೋಧ ವ್ಯಕ್ತಪಡಿಸಿದ್ದಾಳೆ.
ಅಲ್ಲದೇ ಇದೇ ವಿಚಾರವಾಗಿ ಪತಿ- ಪತ್ನಿಯ ನಡುವೆ ವಾಗ್ವಾದವೂ ನಡೆದಿದೆ. ಆದರೆ ಚಂದ್ರಶೇಖರ್ ಈ ಎರಡು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಪತ್ನಿ ಚಾಬಿ ತನ್ನ ಸಹೋದರರಿಗೆ ಈ ವಿಷಯ ಮುಟ್ಟಿಸುತ್ತಾಳೆ. ಅಲ್ಲದೇ ಪತಿಗೆ ತಕ್ಕ ಬುದ್ಧಿ ಕಲಿಸುವಂತೆ ಹೇಳಿದ್ದಾಳೆ ಎನ್ನಲಾಗಿದೆ. ಸಹೋದರಿ ಚಾಬಿ ಮಾತು ಕೇಳಿ ಮನೆಗೆ ಬಂದು ಚಂದ್ರಶೇಖರ್ ಗೆ ದೊಣ್ಣೆಗಳಿಂದ ಮನಬಂದಂತೆ ಪತ್ನಿಯ ಸಹೋದರರು ಥಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಥಳಿಸಿದ್ದರಿಂದ ಗಂಭೀರ ಗಾಯಗೊಂಡು ಚಂದ್ರಶೇಕರ್ ಕುಸಿದು ಬಿದ್ದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಚಂದ್ರಶೇಖರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಸದೇ ಚಂದ್ರಶೇಖರ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಇತ್ತ ಪ್ರಕರಣ ಸಂಬಂಧ ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.