ನ್ಯೂಸ್ ನಾಟೌಟ್: ಡ್ರೀಮ್ 11 ಫ್ಯಾಂಟಸಿ ಗೇಮಿಂಗ್ ಆ್ಯಪ್ ನಲ್ಲಿ ಕೋಟಿ ಗೆಲ್ಲುವುದು ಅಂದರೆ ಅದು ಕೋಟ್ಯಂತರ ಮಂದಿಯಲ್ಲಿ ಒಬ್ಬರಿಗೆ ಸಿಗುವ ಅದೃಷ್ಟ, ಆದರೆ, ಇಂತಹ ಆಟಗಳು ಗೀಳಾಗಿ ಪರಿಣಮಿಸಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಅದೃಷ್ಟ ಬಿಹಾರದ ಬಡ ವ್ಯಕ್ತಿಯೊಬ್ಬನಿಗೆ ಖುಲಾಯಿಸಿದೆ. ಬಿಹಾರದ ಅರಾಹ್ ಜಿಲ್ಲೆಯ ಕೊಹ್ಡಾ ಗ್ರಾಮದ ನಿವಾಸಿಯಾದ ದೀಪು ಓಜಾ ಡ್ರೀಮ್ 11 ನಲ್ಲಿ ಒಂದೂವರೆ ಕೋಟಿ ಗೆದ್ದು ರಾತ್ರೋರಾತ್ರಿ ಊರಿನವರ ಮುಂದೆ ಸ್ಟಾರ್ ಆಗಿದ್ದಾರೆ. ದೀಪುಗೆ ಕ್ರಿಕೆಟ್ ಬಗ್ಗೆ ಅಷ್ಟಾಗಿ ಜ್ಞಾನವಿಲ್ಲ.
8 ತರಗತಿಯಲ್ಲಿ ಶಿಕ್ಷಣ ಬಿಟ್ಟು ಗ್ಯಾರೇಜ್ ನಲ್ಲಿ ಕೆಲಸ ಮಾಡುವ ದೀಪು ಅವರ ಕುಟುಂಬ ಬಡತನದಲ್ಲೇ ದಿನ ಸಾಗಿಸುತ್ತದೆ. ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ದೀಪು ಕಳೆದ 6 ತಿಂಗಳಿನಿಂದ ಡ್ರೀಮ್ 11 ನಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಐಪಿಎಲ್ ನ ಕೆಕೆಆರ್ – ಆರ್ ಸಿಬಿ ನಡುವಿನ ಪಂದ್ಯದಲ್ಲಿ ಡ್ರೀಮ್ 11 ತಂಡವನ್ನು ಕಟ್ಟಿದ್ದರು. ಈ ಪಂದ್ಯದಲ್ಲಿ ಅವರು ರೆಸೆಲ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದರು. ರಸೆಲ್ ಉತ್ತಮವಾಗಿ ಬೌಲಿಂಗ್ ಮಾಡಿದ ಕಾರಣ ಹಾಗೂ ತಂಡದ ಇತರೆ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಪರಿಣಾಮ ದೀಪು ಡ್ರೀಮ್ 11 ನಲ್ಲಿ ಫಸ್ಟ್ ರ್ಯಾಂಕ್ ಬಂದು ಕೋಟ್ಯಧಿಪತಿ ಆಗಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ನನಗೆ ತುಂಬಾ ಸಂತೋಷವಾಗಿದೆ. ಮೊದಲು ಕೋಟಿ ಗೆದ್ದಿದ್ದೇನೆ ಅಂಥ ನಂಬಿಕೆ ಆಗಲಿಲ್ಲ.
ಇಂತಹ ಅಪ್ಲಿಕೇಶನ್ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಇದು ಮೋಸ ಎಂದು ಭಾವಿಸಿದ್ದೆ. ನಾನು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತೇನೆ. ನಾನು ಕಳೆದ ಆರು ತಿಂಗಳಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ ನನಗೆ ಕೆಲಸವಿಲ್ಲ. ನಾನು ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಹಣ ಗೆದ್ದಿದ್ದೇನೆ” ಎಂದು ಹೇಳಿದ್ದಾರೆ. ಡ್
ರೀಮ್ 11 ಒಂದು ಜನಪ್ರಿಯ ಫ್ಯಾಂಟಸಿ ಗೇಮಿಂಗ್ ಆ್ಯಪ್ ಆಗಿದೆ. ಡ್ರೀಮ್ 11 ನಲ್ಲಿ ಪ್ರತಿನಿತ್ಯ 3 ಮಂದಿ ಕೋಟಿ ಗೆಲ್ಲುವ ಅವಕಾಶಗಳಿರುತ್ತದೆ. 49 ಅಥವಾ 59 ರೂಪಾಯಿಯನ್ನು 11 ಜನರ ತಂಡವನ್ನು ಮಾಡಬೇಕಾಗುತ್ತದೆ. ನಾವು ಆಯ್ಕೆ ಮಾಡಿದ ನಾಯಕ/ಉಪನಾಯಕ ಸೇರಿದಂತೆ 11 ಮಂದಿ ಆಟಗಾರರು ಉತ್ತಮವಾಗಿ ಆಡಿದರೆ ರ್ಯಾಂಕ್ ಆಧಾರದಲ್ಲಿ ಕೋಟಿ ಗೆಲ್ಲಬಹುದಾಗಿದೆ. ಪ್ರಥಮ ರ್ಯಾಂಕ್ ನಲ್ಲಿ ಬಂದರೆ ಒಂದೂವರೆ ಕೋಟಿ ಆ ಬಳಿಕ ಲಕ್ಷ ನಂತರ ಸಾವಿರ ಹೀಗೆ ಈ ಫ್ಯಾಂಟಸಿ ಗೇಮಿಂಗ್ ಆ್ಯಪ್ ನಲ್ಲಿ ಬಹುಮಾನ ಇರುತ್ತದೆ. ಆದರೆ ಈ ಗೇಮ್ ನಂಬಿ ಉದ್ದಾರ ಆದವರಿಗಿಂತ ಹಾಳಾಗಿ ಸರ್ವಸ್ವವನ್ನೂ ಕಳೆದುಕೊಂಡವರೇ ಹೆಚ್ಚು.