ನ್ಯೂಸ್ ನಾಟೌಟ್: ಎರಡು ಕಾಲು ಸ್ವಾಧೀನ ಕಳೆದುಕೊಂಡ ವಿಕಲಚೇತನನೊಬ್ಬ ಬಸ್ನಲ್ಲಿ ಪ್ರಯಾಣಿಸಿದ್ದ ವೇಳೆ ಬಸ್ನಿಲ್ದಾಣದಿಂದ ಇನ್ನೊಂದು ಬಸ್ ಗೆ ಹೋಗಲು ಹರಸಾಹಸ ಪಡುತ್ತಿದ್ದನ್ನು ಕಂಡು ಬಸ್ ಕಾರ್ಯನಿರ್ವಾಹಕ, ವಿಕಲಚೇತನನ್ನು ಮಗುವಿನಂತೆ ಬಸ್ನಿಂದ ಎತ್ತಿಕೊಂಡುಹೋಗಿ ಇನ್ನೊಂದು ಬಸ್ಗೆ ಹತ್ತಿಸಿ ಮಾನವೀಯತೆ ಮರೆದಿದ್ದಾರೆ.
ಈ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಬಸ್ ನಿಲ್ದಾಣದಲ್ಲಿ ನಿನ್ನೆ(ಎ.೨೩) ಸಾಯಂಕಾಲ ನಡೆದಿದ್ದು, ವಿಕಲಚೇತನ ಸಾಹಯಕ್ಕೆ ಬಂದ ಕಾರ್ಯನಿರ್ವಾಹಕನ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಸರ್ಕಾರಿ ಡಿಪೋಗೆ ಸೇರಿದ ಬಸ್ ಕಾರ್ಯನಿರ್ವಾಹಕ ವೀರುಪಾಕ್ಷ ಅಂಬಿಗೇರ, ವಿಕಲಚೇತನನಿಗೆ ಸಹಾಯ ಮಾಡಿದ ಬಸ್ ನಿರ್ವಾಹಕ. ನಿನ್ನೆ ಕಲಬುರ್ಗಿಯಿಂದ ಸಿಂದಗಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಬಸ್. ಚೌಡಾಪೂರದಲ್ಲಿ ಸಂಬಂಧಿಸಿಕರು ವಿಕಲಚೇತನನ್ನು ಇದೇ ಬಸ್ಗೆ ಹತ್ತಿಸಿದ್ದರು.
ಸಿಂದಗಿಯಲ್ಲಿ ಬಸ್ ಇಳಿದು ವಿಜಯಪುರಕ್ಕೆ ತೆರಳಬೇಕಿದ್ದ ವಿಕಲಚೇತನ. ಈ ವೇಳೆ ಸಿಂದಗಿ ಬಸ್ ನಿಲ್ದಾಣದಲ್ಲಿ ವಿಜಯಪುರಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಕಂಡು ಕಂಡಕ್ಟರ್ ಗೆ ಮನವಿ ಮಾಡಿದ್ದಾನೆ. ಅದಕ್ಕೆ ಸ್ಪಂದಿಸಿದ ಕಂಡಕ್ಟರ್ ವಿಕಲಚೇತನನ್ನು ಎತ್ತಿಕೊಂಡು ಹೋಗಿ ವಿಜಯಪುರದ ಬಸ್ಸಿನ ಸೀಟಿಗೆ ಕೂಡಿಸಿದ್ದಾನೆ. ಈ ದೃಶ್ಯವನ್ನು ಬಸ್ ನಿಲ್ದಾಣದಲ್ಲೇ ಇದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ವಿಡಿಯೋ ನೋಡಿದ ಬಳಿಕ ಕಾರ್ಯನಿರ್ವಾಹಕ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.