ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಜಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಏ.24 ಬುಧವಾರ ಸಂಜೆ 6 ಗಂಟೆಯಿಂದ ಏ.26 ಶುಕ್ರವಾರ ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.
26ಕ್ಕೆ ಮೊದಲ ಹಂತದ ಲೋಕ ಮತದಾನ ಹಿನ್ನೆಲೆ ದಕ್ಷಿಣ ಕನ್ನಡದಲ್ಲಿ ನಾಳೆಯಿಂದ 26ರವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲೂ ಸೂಕ್ಷ್ಮ ಮತಗಟ್ಟೆ 1737, ಸಾಮಾನ್ಯ ಮತಗಟ್ಟೆ 6351, ಒಟ್ಟು 8088 ಮತಗಟ್ಟೆ ಕೇಂದ್ರಗಳಿವೆ. ಚುನಾವಣೆ ಹಿನ್ನಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಸಿಟಿ ಪೊಲೀಸ್ ಕಮಿಷನರ್ ಮತ್ತು ಬಿಬಿಎಂಪಿ ಕಮಿಷನರ್ ಜಂಟಿ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದ್ದಾರೆ. ಸಿಟಿ ಪೊಲೀಸ್ ಕಮಿಷನರ್ ಸೇರಿ ಮೂವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೆÇಲೀಸ್ ಆಯುಕ್ತರು, 24 ಡಿಸಿಪಿ, 52 ಎಸಿಪಿ , 118 ಇನ್ಸ್ಪೆಕ್ಟರ್ ಸೇರಿ 9397 ಪೊಲೀಸ್ ಅಧಿಕಾರಿ ಸಿಬ್ಬಂದಿ ವರ್ಗ ನಿಯೋಜನೆ. 3919 ಹೋಮ್ ಗಾರ್ಡ್, 11 ಸೆಂಟ್ರಲ್ ಪೊಲೀಸ್ ಟೀಂ, 54 ಸಿಎಆರ್ ಮತ್ತು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಏಪ್ರಿಲ್ 26ಕ್ಕೆ ಮತದಾನ ನಡೆಯುವ ಕ್ಷೇತ್ರಗಳು 1). ಬೆಂಗಳೂರು ಗ್ರಾಮಾಂತರ 2). ಬೆಂಗಳೂರು ಉತ್ತರ 3). ಬೆಂಗಳೂರು ದಕ್ಷಿಣ 4). ಬೆಂಗಳೂರು ಕೇಂದ್ರ 5). ಉಡುಪಿ ಮತ್ತು ಚಿಕ್ಕಮಗಳೂರು 6). ಹಾಸನ 7). ದಕ್ಷಿಣ ಕನ್ನಡ 8). ಚಿತ್ರದುರ್ಗ 9). ತುಮಕೂರು 10). ಮಂಡ್ಯ 11). ಮೈಸೂರು 12). ಚಾಮರಾಜನಗರ 13). ಚಿಕ್ಕಬಳ್ಳಾಪುರ 14). ಕೋಲಾರ