ಹೈದರಾಬಾದ್: ಹೆಣ್ಣು ಮಕ್ಕಳ ಸ್ವಾತಂತ್ರಕ್ಕೆ ಧಕ್ಕೆ ತಂದಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಬೆಳಗ್ಗೆ 6 ರಿಂದ ಸಂಜೆ 7 ರ ತನಕ ನೈಟಿ ಹಾಕುವಂತಿಲ್ಲ. ಒಂದು ವೇಳೆ ನಿಷೇಧಿತ ಸಮಯದಲ್ಲಿ ನೈಟಿ ಹಾಕಿ ಅಡ್ಡಾಡಿದವರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ಹಣವನ್ನು ಅಂತಿಮವಾಗಿ ಗ್ರಾಮದ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ ಎಂದು ಅಲ್ಲಿನ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ ನಿಷೇಧಿತ ಸಮಯದಲ್ಲಿ ನೈಟಿ ಧರಿಸಿರುವ ಮಹಿಳೆಯರ ಬಗ್ಗೆ ಮಾಹಿತಿ ಕೊಟ್ಟವರಿಗೂ 1 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿದೆ.
ರಾತ್ರಿ ಹಗಲೂ ಮಹಿಳೆಯರನ್ನು ನೈಟಿಯಲ್ಲಿ ನೋಡಿ..ನೋಡಿ ಸಾಕಾಗಿ ಹೋಗಿದೆ. ಈ ವಿಚಿತ್ರ ಕಾರಣದಿಂದ ಗ್ರಾಮದ ಪುರುಷರು ಪಂಚಾಯತ್ ಗೆ ದೂರು ನೀಡಿದ್ದರು. ನಂತರ ಸಭೆ ನಡೆಸಿ ಈ ವಿಚಿತ್ರ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.