ನ್ಯೂಸ್ ನಾಟೌಟ್: ಹುಬ್ಬಳ್ಳಿಯ ನೇಹಾ ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣದಿಂದ ಸುದ್ದಿಯಾಗಿದ್ದು, ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಪ್ರಯತ್ನದ ಆರೋಪ ಸಹ ಕೇಳಿಬಂದಿದೆ. ಮತಾಂತರಕ್ಕೆ ಯತ್ನಿಸಿದ ಪ್ರಮುಖ ಅರೋಪಿ ರಫೀಕ್ ಬೇಪಾರಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.
ಇದಲ್ಲದೆ ಇವರಿಗೆ ಸಾಥ್ ನೀಡಿದ ಆರೋಪದ ಮೇಲೆ ಇನ್ನೂ ಐದು ಜನರ ವಿರುದ್ಧ ದೂರು ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಖಾಸಗಿ ಫೊಟೋಗಳನ್ನು ತೆಗೆದುಕೊಂಡ ಆರೋಪಿಯು ನಾನು ಹೇಳಿದ ಹಾಗೆ ಕೇಳದಿದ್ದರೆ ಮತ್ತು ಮತಾಂತರಗೊಳ್ಳದಿದ್ದರೆ ಈ ಪೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವದಾಗಿ ಹೇಳಿದ್ದಾನೆ. ಮನೆಯಲ್ಲಿ ದಿನನಿತ್ಯ ಐದು ಬಾರಿ ನಮಾಜ್ ಮಾಡಬೇಕು. ಹಣೆಗೆ ಕುಂಕುಮ ಹಚ್ಚಬಾರದು. ಬುರ್ಖಾ ಹಾಕಿಕೊಳ್ಳಬೇಕು ಎಂದು ಬೆದ* ರಿಕೆ ಹಾಕಿದ್ದಾನೆ ಎನ್ನಲಾಗಿದೆ.. ಅಷ್ಟೇ ಅಲ್ಲದೆ ಎಷ್ಟು ಸಲ ಹೇಳಿದರೂ ಕೇಳದೆ ನನ್ನ ತಾಳಿಯನ್ನೂ ಕಿತ್ತುಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮುನವಳ್ಳಿಯಲ್ಲಿ ವರ್ಷದ ಹಿಂದೆ ಸಂತ್ರಸ್ತ ಮಹಿಳೆಯ ಜೊತೆಗೆ ಸಂಪರ್ಕ ಬೆಳೆಸಿಕೊಂಡಿದ್ದ ಆರೋಪಿಯು ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಹಲವಾರು ರೀತಿಯ ಆಮಿಷಗಳನ್ನು ಒಡ್ಡಿದ್ದಾನೆ. ಕೆಲಸ ಕೊಡಿಸುವದಾಗಿ ಹೇಳಿದ್ದಲ್ಲದೆ ಆಕೆಯನ್ನು ಬೆಳಗಾವಿಗೆ ಕರೆತಂದು ಲೈಂಗಿ* ಕ ದೌ* ರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಮಹಿಳೆಯು ದೂರಿದ್ದಾಳೆ.