ನ್ಯೂಸ್ ನಾಟೌಟ್: ನನ್ನ ಮಗಳ ಹತ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಆಯುಕ್ತರು ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗೆ ಆದ್ರೆ, ನಾವೂ ಸಹ ಸಿಎಂಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮೃತ ನೇಹಾಳ ತಂದೆ ನಿರಂಜನ್ ಹಿರೇಮಠ ಹೇಳಿದ್ದಾರೆ. ನೇಹಾ ತಂದೆ ಮಾತನಾಡಿ, ನಮ್ಮದು ಕ್ರಿಮಿನಲ್ ಹಿನ್ನೆಲೆಯುಳ್ಳ ಕುಟುಂಬ ಅಲ್ಲ. ಐದು ಮಂದಿ ಸೇರಿ ನನ್ನ ಮಗಳ ಹತ್ಯೆ ಮಾಡಿದ್ದಾರೆ.
ಉಳಿದ ಫಯಾಜ್ನನ್ನ (Fayaz) ಮುಂದಕ್ಕೆ ಬಿಟ್ಟು ಕೊಲೆ ಮಾಡಿಸಿದ್ದಾರೆ. ಆ ಸಂದರ್ಭದಲ್ಲಿ ಉಳಿದ ನಾಲ್ಕೂ ಜನರು ಅಲ್ಲೇ ಇದ್ದರು. ಆದ್ರೆ 100ಕ್ಕೆ ನೂರು ಪೊಲೀಸ್ ಆಯುಕ್ತರು ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆಡಳಿತ ಪಕ್ಷದ ಕೆಲ ಸ್ಥಳೀಯ ಜನಪ್ರತಿನಿಧಿಗಳೂ ತಪ್ಪು ಮಾಹಿತಿ ನೀಡಿದ್ದಾರೆ. ಗೃಹಸಚಿವರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬೆಳೆವಣಿಗೆ ನೋಡಿದರೆ ಪ್ರಕರಣ ದಾರಿ ತಪ್ಪುವ ಹಾಗೆ ಕಾಣುತ್ತಿದೆ. ಸಿ.ಎಂ ಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಹೇಳಿದ್ದಾರೆ. ಈ ಪ್ರಕರಣದ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಬೆನ್ನಿಗೆ ನಿಂತು ಧೈರ್ಯ ಹೇಳಬೇಕು ಎಂದು ಪ್ರಕರಣ ಸತ್ಯಾಸತ್ಯತೆ ಹೊರತೆಗೆಯಬೇಕು ಎಂದು ಮನವಿ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ (G Parameshwara) ವಿಷಾದ ವ್ಯಕ್ತಪಡಿಸಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ನಿರಂಜನ ಅವರು, ಗೃಹ ಸಚಿವರು ವಿಷಾದ ವ್ಯಕ್ತಪಡಿಸಿದ್ದು ಇರಲಿ, ಆದ್ರೆ ಅವರು ನಮ್ಮ ಮನೆಗೆ ಬಂದು ಮಾತನಾಡಬೇಕಿತ್ತಲ್ಲ. ಆ ರೀತಿಯ ಬೆಳವಣಿಗೆ ಆಗಿಲ್ಲ. ಈಗ ನಾನು ಮಾತನಾಡಿದ್ದೇನೆ ಎಂದು ಸೃಷ್ಟಿ ಮಾಡಿ ಹೇಳುತ್ತಿದ್ದಾರೆ ಎಂದು ನೇಹಾ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.