ನ್ಯೂಸ್ ನಾಟೌಟ್: ಯಾವುದೇ ಒಂದು ಕೆಲಸ ಮಾಡುವುದಿದ್ದರೂ ಹೃದಯ ತುಂಬಿ ಮಾಡಬೇಕು. ಆಗ ಮಾತ್ರ ಆ ದೇವರಿಗೆ ಮಾಡಿದ ಕೆಲಸ ಹೆಚ್ಚು ಪ್ರಿಯವಾಗುತ್ತದೆ. ಅಂತಹುದೇ ಒಂದು ಪುಣ್ಯದ ಕೆಲಸವನ್ನ ಸಣ್ಣ ವಯಸ್ಸಿಗೆ ದೊಡ್ಡ ಚಿಂತನೆಯನ್ನ ಸಂಪಾಜೆ ಗ್ರಾಮದ ಆರನೇ ತರಗತಿ ಬಾಲಕಿಯೊಬ್ಬಳು ಮಾಡಿ ಸದ್ದು ಮಾಡಿದ್ದಾಳೆ. ಹೌದು 6ನೇ ತರಗತಿ ಬಾಲಕಿಯೊಬ್ಬಳು ಕ್ಯಾನ್ಸರ್ ಪೀಡಿತರಿಗಾಗಿ ಮರುಗಿದ್ದಾಳೆ. ತನ್ನ ಉದ್ದದ ಕೇಶವನ್ನೇ ದಾನ ಮಾಡಿದ್ದಾಳೆ.
ಈಕೆಯ ಕಾರ್ಯಕ್ಕೆ ಸಮಾಜಪರ ಚಿಂತನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈಕೆ ಹೆಸರು ಧೃತಿ ಕೆ.ಎಸ್ ಕೀಲಾರು. ಕಲ್ಲುಗುಂಡಿಯಲ್ಲಿ ದಿನಸಿ ವ್ಯಾಪಾರಿಯಾಗಿರುವ ಶರತ್ ಕೀಲಾರು ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯೆ ರಜನಿ ಶರತ್ ಅವರ ಪುತ್ರಿ. ಈಕೆ ಸದ್ಯ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.