ನ್ಯೂಸ್ ನಾಟೌಟ್: ದುಡ್ಡಿದ್ರೆ ದುನಿಯಾ ಅನ್ನೋ ಕಾಲ ಇದು. ದುಡ್ಡು ಇಲ್ಲದಿದ್ದರೆ ಬದುಕು ಕಷ್ಟ ಎಂಬ ಸ್ಥಿತಿ. ವ್ಯತಿರಿಕ್ತ ಎಂಬಂತೆ ತಮ್ಮಲ್ಲಿದ್ದ 200 ಕೋಟಿ ರೂಪಾಯಿ ಆಸ್ತಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಈ ಜೈನ ದಂಪತಿ ಸುದ್ದಿಯಾಗಿದ್ದಾರೆ. ಅದರಲ್ಲೂ ಅವರು ಸನ್ಯಾಸ ಸ್ವೀಕರಿಸುವ ಮೊದಲು ಮೆರವಣಿಗೆ ಮಾಡಿ ಇದ್ದ ನಗದನ್ನೆಲ್ಲಾ ಜನರ ಮೇಲೆ ಸುರಿದಿದ್ದಾರೆ.
ಆ ವಿಡಿಯೊ ವೈರಲ್ ಆಗಿದೆ. ತಮ್ಮ 200ಕೋಟಿ ಮೌಲ್ಯದ ಆಸ್ತಿಯನ್ನು ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಶ್ರೀಮಂತ ಜೈನ ದಂಪತಿಗಳನ್ನು ನೋಡಿದರೆ ನಿಜಕ್ಕೂ ಆಚ್ಚರಿಯಾಗುತ್ತದೆ. ಭವೇಶ್ ಭಂಡಾರಿ ಅವರು ಕಟ್ಟಡ ನಿರ್ಮಾಣ ಉದ್ಯಮಿಯಾಗಿದ್ದು, ಇವರು ಸಬರ್ಕಾಂತ ಮತ್ತು ಅಹಮದಾಬಾದ್ ಎರಡರಲ್ಲೂ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು 2022ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇದೀಗ ಭಂಡಾರಿ ಮತ್ತು ಅವರ ಪತ್ನಿ ತನ್ನ ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.
ಅದಕ್ಕಾಗಿ ದಂಪತಿ ಗುಜರಾತ್ ನ ಸಬರ್ ಕಾಂತ ಜಿಲ್ಲೆಯಲ್ಲಿ ಟ್ರಕ್ ಅನ್ನು ರಥದಂತೆ ಅಲಂಕರಿಸಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ವಾಹನದ ಮೇಲೆ ನಿಂತು ಮೆರವಣಿಗೆ ನಡೆಸಿದ್ದಾರೆ. ಕಿರಿದಾದ ರಸ್ತೆಯಲ್ಲಿ ಅವರು ಪ್ರಯಾಣಿಸುವಾಗ ಕುಟುಂಬದವರು ಅವರನ್ನು ಸುತ್ತುವರಿದಿದ್ದಾರೆ. ಭಂಡಾರಿ ಮತ್ತು ಆತನ ಪತ್ನಿ ನೆರೆದಿದ್ದ ಜನರ ಮೇಲೆ ಬಟ್ಟೆಗಳನ್ನು ಹಾಗೂ ಹಣವನ್ನು ಎಸೆದಿದ್ದಾರೆ. ಹಣವನ್ನು ಪಡೆಯಲು ಜನರು ಮುಗಿಬಿದ್ದಿದ್ದಾರೆ. ಈ ವಿಡಿಯೊ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.