ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ರಾಮ ನವಮಿಯ ಹಬ್ಬದ ಸಡಗರ ಕಳೆಗಟ್ಟಿದೆ. ಶ್ರೀರಾಮನ ಹಣೆಯ ಮೇಲೆ ಸೂರ್ಯತಿಲಕ ಬರುವಂತೆ ದೇಗುಲದ ನಿರ್ಮಾಣವಾಗಿದ್ದು, ಇಂದು ಮಧ್ಯಾಹ್ನ ರಾಮನಿಗೆ ಸೂರ್ಯ ನಮನ ಸಲ್ಲಿಸಿದ್ದಾನೆ. ಇಂತಹ ರಚನೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲೂ ನಾವು ಕಾಣಬಹುದು.
ಇದೇ ಮೊದಲ ಬಾರಿಗೆ ಸೂರ್ಯವಂಶಸ್ಥ ಶ್ರೀರಾಮನ ಹಣೆಯ ಮೇಲೆ ರಾಮ ಮಂದಿರದಲ್ಲಿಯೇ ಸೂರ್ಯತಿಲಕ ಇಡಲಾಗಿದೆ. ಅಂದಾಜು 4-5 ನಿಮಿಷಗಳ ಕಾಲ ಶ್ರೀರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಿದೆ. ಪ್ರತಿ ವರ್ಷದ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲಕರಾಮನಿಗೆ ಸೂರ್ಯ ತಿಲಕ ಇಡಲಾಗುತ್ತದೆ. ಸೂರ್ಯ ವಂಶಜನಾಗಿದ್ದ ಶ್ರೀರಾಮ ಹುಟ್ಟಿದಾಗ, ಸೂರ್ಯ ಒಂದು ತಿಂಗಳು ಅಯೋಧ್ಯೆಯನ್ನು ಬಿಟ್ಟು ಹೋಗಿರಲಿಲ್ಲ ಎನ್ನುವ ಐತಿಹ್ಯವೂ ಇದೆ. ರಾಮನವಮಿಯ ಸಂದರ್ಭದಲ್ಲಿ ರಾಮಲಲ್ಲಾನ ಸೂರ್ಯ ತಿಲಕದ ದರ್ಶನವು ಬಹಳ ಅದ್ಭುತವಾಗಿರುತ್ತದೆ. ದೇವಾಲಯದ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿರುವ ಮೊದಲ ಕನ್ನಡಿಯ ಮೇಲೆ ಸೂರ್ಯನ ಬೆಳಕು ಬೀಳಲಿದೆ.
ಇಲ್ಲಿಂದ ಅದು ಪ್ರತಿಫಲನವಾಗಲಿದ್ದು, ಹಿತ್ತಾಳೆಯ ಪೈಪ್ ಅನ್ನು ಪ್ರವೇಶಿಸುತ್ತದೆ. ಹಿತ್ತಾಳೆ ಪೈಪ್ನಲ್ಲಿ ಅಳವಡಿಸಲಾದ ಎರಡನೇ ಕನ್ನಡಿಗೆ ತಾಕಿದ ನಂತರ, ಅವು ಮತ್ತೆ 90 ಡಿಗ್ರಿಗಳಲ್ಲಿ ಪ್ರತಿಫಲಿಸುತ್ತದೆ. ನಂತರ, ಹಿತ್ತಾಳೆಯ ಪೈಪ್ ಮೂಲಕ ಹೋಗುವಾಗ, ಈ ಕಿರಣವು ಮೂರು ವಿಭಿನ್ನ ಮಸೂರಗಳ ಮೂಲಕ ಹಾದುಹೋಗುತ್ತದೆ ಮತ್ತು ಉದ್ದವಾದ ಪೈಪ್ನ ಗರ್ಭಗುಡಿಯ ತುದಿಯಲ್ಲಿರುವ ಕನ್ನಡಿಗೆ ಹೊಡೆಯುತ್ತದೆ. ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಗಾಜಿನ ಮೇಲೆ ಕಿರಣಗಳು ನೇರವಾಗಿ ರಾಮ್ ಲಲ್ಲಾನ ಹಣೆಯ ಮೇಲೆ 75 ಮಿಮೀ ವೃತ್ತಾಕಾರದ ತಿಲಕವನ್ನು ಇಡುತ್ತದೆ. ಐದು ನಿಮಿಷಗಳ ಕಾಲ ನಿರಂತರವಾಗಿ ಈ ತಿಲಕ ಇರುತ್ತದೆ ಎನ್ನಲಾಗಿದೆ.