ನ್ಯೂಸ್ ನಾಟೌಟ್: ಗುರು ಶಿಷ್ಯರ ನಡುವಿನ ಸಂಬಂಧದ ಪಾವಿತ್ರತ್ಯೆ ಬಗ್ಗೆ ನಮಗೆಲ್ಲ ಚೆನ್ನಾಗಿಯೇ ಅರಿವಿದೆ ಆದರೆ ಇತ್ತೀಚೆಗೆ ವಿಚಿತ್ರ ಘಟನೆಗಳು ವರದಿಯಾಗುತ್ತಿವೆ. ಇದೀಗ ಶಿಕ್ಷಕಿ ತನ್ನ ವಿದ್ಯಾರ್ಥಿ ಜೊತೆಗೆ ಸೆಕ್ಸ್ ನಡೆಸಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ವಿದ್ಯಾರ್ಥಿ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದ ಶಿಕ್ಷಕಿಗೆ ಪೊಲೀಸರು ಶಾಕ್ ನೀಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಕಾರಿನ ಹಿಂಭಾಗದ ಸೀಟಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಶಿಕ್ಷಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ವಿದ್ಯಾರ್ಥಿ ಅಂಡರ್ ವೇರ್ನಲ್ಲಿ ಓಡಿದ ಘಟನೆ ಅಮೆರಿಕದ ನೆಬ್ರಾಸ್ಕಾದಲ್ಲಿ ನಡೆದಿದೆ. ಒಮಹಾ ಹೈಸ್ಕೂಲ್ ಟೀಚರ್ ಎರಿನ್ ವಾರ್ಡ್ಗೆ ಮದುವೆಯಾಗಿದೆ. ಆದರೆ ಎರಿನ್ ವಾರ್ಡ್ಗೆ ವಿದ್ಯಾರ್ಥಿಗಳ ಜೊತೆ ಲೈಂಗಿಕ ಕ್ರಿಯೆಲ್ಲಿ ಹೆಚ್ಚಿನ ಆಸಕ್ತಿ. ಇದಕ್ಕಾಗಿ ಅಪ್ರಾಪ್ತ ಬಾಲಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ವಿದ್ಯಾರ್ಥಿಗಳಿಗೆ ಆಸೆ ಆಮಿಷ ತೋರಿಸಿ ಸುಲಭವಾಗಿ ತನ್ನ ತೆಕ್ಕೆಗೆ ಪಡೆಯುತ್ತಿದ್ದ ಏರಿನ್ ವಾರ್ಡ್ ಬಳಿಕ ಲೈಂಗಿಕ ತೃಪ್ತಿಗೆ ಬಳಸಿಕೊಳ್ಳುತ್ತಿದ್ದಳು ಎಂದು ಹಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋದ ಏರಿನ್ ವಾರ್ಡ್ ಒಮಹಾ ಶಾಲಾ ಆವರಣದಿಂದ ಕೆಲ ದೂರದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದಾಳೆ. ಬಳಿಕ ವಿದ್ಯಾರ್ಥಿಯನ್ನು ನಿಧಾನವಾಗಿ ತನ್ನ ಲೈಂಗಿಕೆ ಕ್ರಿಯೆಗೆ ಬಳಸಿಕೊಳ್ಳಲು ಆರಂಭಿಸಿದ್ದಾಳೆ. ಫೋನ್ ಮೂಲಕ ಕೆಲ ವಿಡಿಯೋಗಳನ್ನು ವಿದ್ಯಾರ್ಥಿಗೆ ತೋರಿಸಿದ್ದಾಳೆ. ಸೆಕ್ಸ್ ಮಾತುಕತೆ, ಆಪ್ತತೆ ಮುಂದುವರಿದಿದೆ. ಇತ್ತ ಕೆಲ ಹೊತ್ತಿನಿಂದ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಶಿಕ್ಷಕಿಯನ್ನು ಅರೆಸ್ಟ್ ಮಾಡಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.