ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ರಂಬೂಟನ್ ಕೃಷಿಯನ್ನು ಮಾಡಿ ಹಳದಿ ರೋಗದ ಅಡಿಕೆ ಕೃಷಿಯಿಂದ ಬಳಲಿ ನೊಂದಿದ್ದ ನೂರಾರು ರೈತರಿಗೆ ಸ್ಪೂರ್ತಿಯಾಗಿದ್ದ ಪ್ರಗತಿ ಪರ ಕೃಷಿಕ ಅಂಬೆಕಲ್ಲಿನ ಗೋಪಾಲಕೃಷ್ಣ ಅವರು ಹೃದಯಾಘಾತದಿಂದ ನಿಧನತರಾಗಿದ್ದಾರೆ. ಅವರಿಗೆ ೭೬ ವಷವಾಗಿತ್ತು.
ಬೆಂಗಳೂರಿನಲ್ಲಿ ಇಂಜಿನೀಯರ್ ಆಗಿದ್ದ ಅವರು ಆ ವೃತ್ತಿಯಲ್ಲಿ ನಿವೃತ್ತಿ ಹೊಂದಿದ ಬಳಿಕ ಸಂಪಾಜೆಯಲ್ಲಿ ನೆಲೆಸಿದ್ದರು. ಸಂಪಾಜೆಗೆ ಬಂದವರೇ ತಮ್ಮ ಜಮೀನಿನಲ್ಲಿ ಏನಾದರೂ ಹೊಸತನದ ಕೃಷಿಯನ್ನು ಮಾಡಬೇಕೆಂದು ತೀರ್ಮಾನಿಸಿದರು. ಹಳದಿ ರೋಗದಿಂದಾಗಿ ಅಡಿಕೆ ಕೃಷಿ ಸಂಪೂಣ ನೆಲಕ್ಕಚ್ಚಿರುವ ಸಂಪಾಜೆಯಲ್ಲಿ ರಂಬೂಟನ್ ಕೃಷಿಯನ್ನು ಮಾಡಿ ಸೈ ಅನಿಸಿಕೊಂಡರು. ವಾರ್ಷಿಕ ಐವತ್ತು ಲಕ್ಷಕ್ಕೂ ಹೆಚ್ಚು ಆದಾಯವನ್ನು ರಂಬೂಟನ್ ಕೃಷಿಯಿಂದ ಗಳಿಸಿದರು.
ಮಾತ್ರವಲ್ಲ ನೂರಾರು ಮಂದಿಗೆ ಗ್ರಾಮದಲ್ಲಿ ಸ್ಫೂರ್ತಿಯಾದರು. ಇವರು ಅಂಬೆಕಲ್ಲು ಮುತ್ತಯ್ಯ ಗೌಡ ಮತ್ತು ಯಶೋಧಾ ದಂಪತಿಯ ಪುತ್ರರಾಗಿದ್ದಾರೆ. ಮೃತರ ಪುತ್ರ ಆಸ್ಟ್ರೇಲಿಯಾದಲ್ಲಿದ್ದು ಆಗಮನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.