ನ್ಯೂಸ್ ನಾಟೌಟ್ : ಬೆಂಗಳೂರಿನ ಸಂಚಾರ ದಟ್ಟಣೆಯಿಂದ ಒಂದೇ ದಿನ 350ಕ್ಕೂ ಹೆಚ್ಚು ಮಂದಿ ನಿಗದಿತ ಸಮಯಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪದೇ ವಿಮಾನ ಮಿಸ್ ಮಾಡಿಕೊಂಡಿದ್ದರ ಬಗ್ಗೆ ಟ್ರಾಫಿಕ್ ಮ್ಯಾಪ್ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದೆ. ಸಂಚಾರ ದಟ್ಟಣೆಯಲ್ಲಿ ವಿಶ್ವದ ಎರಡನೇ ಬೃಹತ್ ನಗರವಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜಧಾನಿ ಬೆಂಗಳೂರಿನ ಸಮಸ್ಯೆ ಕುರಿತು ಕೇರಳ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಂಚಾರ ದಟ್ಟಣೆಯ ಸಮಸ್ಯೆಯಿಂದ ಬೆಂಗಳೂರು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ‘ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 374 ಜನರು ತಮ್ಮ ವಿಮಾನಯಾವನ್ನು ಮಿಸ್ ಮಾಡಿಕೊಂಡಿದ್ದಾರೆ. ಅನೇಕರು ವಿಮಾನ ನಿಲ್ದಾಣಕ್ಕೆ ನಡೆದುಕೊಂಡು ಹೋಗಬೇಕಾಗಿತ್ತು ಎಂದು ನೀವು ಕೇಳಿದ್ದೀರಾ?’ ಎಂದು ಕೇರಳ ಕಾಂಗ್ರೆಸ್ ವ್ಯಂಗ್ಯವಾಡಿದೆ. ನಗರದ ಪ್ರಮುಖ ಜಂಕ್ಷ ಆಗಿರುವ ಹೆಬ್ಬಾಳದಿಂದ ಎಂಜಿ ರಸ್ತೆ, ಏರ್ಪೋರ್ಟ್ ರಸ್ತೆಯಲ್ಲಿ 7 ಕಿಮೀ ವಿಪರೀತ ಸಂಚಾರ ದಟ್ಟಣೆ ಕಂಡು ಬರುತ್ತದೆ. ಇದನ್ನು ದಾಟಲು ಒಂದು ವಾಹನಕ್ಕೆ ಸುಮಾರು 45 ನಿಮಿಷದಿಂದ 1 ಗಂಟೆ ಬೇಕಾಗುತ್ತದೆ.
ಬಹುತೇಕ ಸಮಯ ಇಲ್ಲಿಯೇ ಸವಾರರು, ಪ್ರಯಾಣಿಕರು ಕಳೆಯುತ್ತಿದ್ದಾರೆ. ಹೀಗೆ ನಿಮಿಷ ಇಲ್ಲವೇ ಗಂಟೆಗಟ್ಟಲೆ ವಾಹನಗಳ ದಟ್ಟಣೆಯಲ್ಲಿ ಸಿಲುಕಿದ ಅನೇಕರು ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವಿಲ್ಲಿ ವಿಫಲವಾಗಿದ್ದಾರೆ. ಬೆಂಗಳೂರಿನಿಂದ ಬೇರೆಡೆ ತೆರಳಬೇಕಿದ್ದ ವಿಮಾನಗಳನ್ನು ತಪ್ಪಿಸಿಕೊಂಡಿದ್ದಾರೆ. ಇತ್ತ ಇದೇ ಸಂಚಾರ ದಟ್ಟಣೆಯಿಂದಾಗಿ ನಿಗದಿ ಸಮಯಕ್ಕೆ ಆಸ್ಪತ್ರೆ ಸೇರದತೆ ತುರ್ತು ಪ್ರಕರಣಗಳಲ್ಲಿ ರೋಗಿಗಳು ಆಂಬುಲೆನ್ಸ್ನಲ್ಲಿಯೇ ಜೀವ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್ ಬಂದರೆ ಬೇರೆ ವಾಹನಗಳು ಸರಿದು ಹೋಗಲು ಅವಕಾಶ ಮಾಡಿಕೊಡಲು ಆಗದಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿರುತ್ತದೆ. ಬ*ಲಿಯಾಗುವ ಜೀವಿಗಳಿಗೆ ಯಾರು ಹೊಣೆ? ನೂರಾರು ಪ್ರಯಾಣಿಕರ ವಿಮಾನ ತಪ್ಪಿಸಿಕೊಂಡು ಅತ್ತ ಹೋಗಲು ಆಗದೇ, ಮರಳಿ ಬಾರಲು ಆಗದೇ ಪರದಾಡುತ್ತಿದ್ದಾರೆ. ಆರ್ಥಿನ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಕೇರಳ ಕಾಂಗ್ರೆಸ್ ಪ್ರಶ್ನಿಸಿದೆ.