ನ್ಯೂಸ್ ನಾಟೌಟ್: ಚುನಾವಣೆ ಬಂತೆಂದರೆ ಹಣ, ಮಧ್ಯ ಮತ್ತು ಉಡುಗೊರೆಗಳ ಕಾರ್ ಬಾರು ಜೋರಾಗಿರುತ್ತವೆ. ಚುನಾವಣಾ ಆಯೋಗದ ಅಧಿಕಾರಿಗಳು ಅನಧಿಕೃತ ವಸ್ತುಗಳನ್ನು ವಶಕ್ಕೆ ಪಡೆದು ಉತ್ತಮ ಪ್ರಜಾಪ್ರಭುತ್ವ ರಾಜಕೀಯ ಸ್ಥಿರತೆಗೆ ಸಹಾಯ ಮಾಡುತ್ತಾರೆ. ಈ ಬಾರಿಯ ಲೋಕಸಭಾ ಚುನಾವಣೆಗೂ ಮುಂಚೆ(ಎ.15 ರ ವಳಗೆ) ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಮಾರ್ಚ್ 1 ರಿಂದ ಏಪ್ರಿಲ್ 13ರ ವರೆಗೆ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಚುನಾವಣಾ ಆಯೋಗ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ.
75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಆಯೋಗ ತಿಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಚುನಾವಣೆ ನಡೆಯುವ ಮೊದಲೇ ಕಳೆದ ವರ್ಷದ ದಾಖಲೆಯನ್ನು ಮುರಿಯಲಾಗಿದೆ.
ಇಲ್ಲಿಯವರೆಗೆ ಕರ್ನಾಟಕದಿಂದ 35.53 ಕೋಟಿ ರೂ ನಗದು, 1.30 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಯಾವುದು ಎಷ್ಟು? ನಗದು – 395.39 ಕೋಟಿ ರೂ., ಮದ್ಯ – 489.31 ಕೋಟಿ ರೂ.(35,829,924.75 ಲೀ.), ಡ್ರಗ್ಸ್ – 2,068 ಕೋಟಿ ರೂ. , ಅಮೂಲ್ಯ ಲೋಹ– 562.10 ಕೋಟಿ ಉಡುಗೊರೆ ಇತ್ಯಾದಿಗಳು – 1,142.49 ಕೋಟಿ ಎಂದು ಚುನಾವಣಾ ಆಯೋಗ ತಿಳಿಸಿದೆ.