ವರದಿ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬಲ್ಲ ಸ್ವರ್ಣ ಪ್ರಾಶನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯ ಡಾ| ಪ್ರಮೋದ್ ಪಿ ಎ. ನೀಡಿದ್ದಾರೆ. ನಿಮ್ಮ ಮಕ್ಕಳಿಗೆ ಸ್ವರ್ಣ ಪ್ರಾಶನವನ್ನು ಏಕೆ ನೀಡಬೇಕು ಅದರ ಪ್ರಾಮುಖ್ಯತೆ ಏನು ಅನ್ನುವುದರ ಬಗ್ಗೆ ಅವರು ವಿವರಿಸಿರುವ ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲಬಹುದಾದ ವರದಿ ಇಲ್ಲಿದೆ ವೀಕ್ಷಿಸಿ.
ಸ್ವರ್ಣ ಪ್ರಾಶನ ಎಂದರೇನು?
ಇದು ಪುಷ್ಯ ನಕ್ಷತ್ರದಂದು ಮಕ್ಕಳಿಗೆ ನೀಡುವ ಸುವರ್ಣ ಭಸ್ಮ ಹಾಗೂ ಕೆಲವು ಔಷದಿಗಳ ಮಿಶ್ರಣವಾಗಿದೆ. ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಾ ಸರಿಯಾದ ಕ್ರಮದಲ್ಲಿ ಸ್ವರ್ಣ ಪ್ರಾಶನವನ್ನು ಸೇವಿಸಿದರೆ ಆ ಮಗುವಿನಲ್ಲಿ ರೋಗ ನಿರೋದಕ ಶಕ್ತಿ ವೃದ್ಧಿಸಿ ಆರೋಗ್ಯವನ್ನು ಕಾಪಾಡುತ್ತದೆ ಅನ್ನುವುದು ನಿರೂಪಿತವಾಗಿದೆ.
ಸ್ವರ್ಣ ಪ್ರಾಶನವನ್ನು ಎಲ್ಲಿ ಪಡೆಯಬಹುದು?
ಆಯುರ್ವೇದೀಯ ಪದ್ದತಿಯಲ್ಲಿ ತಿಳಿಸಿದಂತಹ ಕ್ರಮದಲ್ಲಿ ತಯಾರಿಸಿದಂತಹ ಸ್ವರ್ಣ ಪ್ರಾಶನವು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿ ಲಭ್ಯವಿದ್ದು ಅಲ್ಲಿ ಪಡೆದುಕೊಳ್ಳಬಹುದಾಗಿದೆ.
ಸ್ವರ್ಣ ಪ್ರಾಶನವನ್ನು ಪುಷ್ಯ ನಕ್ಷತ್ರದಂದೇ ಏಕೆ ನೀಡುತ್ತಾರೆ?
ಪುಷ್ಯ ನಕ್ಷತ್ರದಂದು ಆಯುರ್ವೇದ ಔಷದಿಗಳ ಗುಣವು ಶ್ರೇಷ್ಠ ಮಟ್ಟದಲ್ಲಿ ಇರುವುದರಿಂದ ಪುಷ್ಯ ನಕ್ಷತ್ರದಂದು ಸ್ವರ್ಣ ಪ್ರಾಶನವನ್ನು ಮಾಡಿಸುವುದು ಉತ್ತಮವಾಗಿರುತ್ತದೆ. ಈ ಪುಷ್ಯ ನಕ್ಷತ್ರವು 27 ದಿನಗಳಿಗೊಮ್ಮೆ ಬರುವುದು.
ವಯಸ್ಸಿನ ಮಿತಿ
ಹುಟ್ಟಿದ ಮಗುವಿನಿಂದ 16 ವರ್ಷದವರೆಗೆ ನೀಡಬಹುದು. (0-16) ಹುಟ್ಟಿದ ಮಗುವಿನಿಂದ ಹದಿನಾರು ವರ್ಷಗಳವರೆಗೆ ಸ್ವರ್ಣ ಪ್ರಾಶನವನ್ನು ನೀಡುವುದರಿಂದ ಉತ್ತಮ ಲಾಭಗಳಾಗುತ್ತವೆ.
ಡೋಸೇಜ್
ಪ್ರಾಯಕ್ಕೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡಲಾಗುವುದು.
ಇತ್ತೀಚೆಗೆ ಎಲ್ಲಾ ಕಡೆಗಳಲ್ಲೂ ಸ್ವರ್ಣ ಪ್ರಾಶನ ಲಭ್ಯವಿರುತ್ತದೆ, ಅದರೆ ಕೆವಿಜಿ ಆಯುರ್ವೇದದಲ್ಲಿ ತಯಾರಾಗುವ ಸ್ವರ್ಣ ಪ್ರಾಶನ ಎಷ್ಟು ಭಿನ್ನ?
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದಿಂದ ತಯಾರಿಸಲ್ಪಡುವ ಸ್ವರ್ಣಬಿಂದು ಪ್ರಾಶನವು ಸಂಸ್ಥೆಯ ಪ್ರಯೋಗಾಲಯದಲ್ಲಿ ಪ್ರತಿ ಬಾರಿಯು ಸುರಕ್ಷತಾ ಕ್ರಮದೊಂದಿದಗೆ ಗುಣಮಟ್ಟವನ್ನು ಪರಿಶೀಲಿಸಿ ಕೌಮಾರಭ್ರತ್ಯ (ಮಕ್ಕಳ ವಿಭಾಗ) ದಿಂದ ನೀಡಲಾಗುವುದು.