ನ್ಯೂಸ್ ನಾಟೌಟ್: ಚುನಾವಣಾ ರೋಡ್ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಎಡಗಣ್ಣಿನ ಮೇಲ್ಭಾಗದಲ್ಲಿ ತೀವ್ರ ಗಾಯವಾಗಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ವೈಎಸ್ಆರ್ಸಿಪಿ ವತಿಯಿಂದ “ಮೇಮಂತಾ ಸಿದ್ಧಂ” ಎಂಬ ಚುನಾವಣಾ ಯಾತ್ರೆಯ ವೇಳೆ ಬಸ್ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ. ಕ್ಯಾಟ್ ಬಾಲ್ ಮೂಲಕ ಸಿಎಂ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜಗನ್ ಹಣೆಗೆ ಗಾಯವಾಗುತ್ತಿದ್ದಂತೆ ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಪಂದಿಸಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿ ರೋಡ್ ಶೋ ಮುಂದುವರಿಸಿದ್ದಾರೆ. ಸಿಎಂ ಜಗನ್ ಅವರ ಪಕ್ಕದಲ್ಲಿದ್ದ ಶಾಸಕ ವೆಲ್ಲಂಪಳ್ಳಿ ಅವರ ಎಗಣ್ಣಿಗೂ ಗಾಯವಾಗಿದೆ ಎಂದು ವರದಿಯಾದಿದೆ. ವಿಜಯವಾಡದಲ್ಲಿ ಶನಿವಾರ (ಏಪ್ರಿಲ್ 13) ಮೂರೂವರೆ ಗಂಟೆಗಳ ಕಾಲ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಿತು. ಸದ್ಯ ಆಂಧ್ರ ಸಿಎಂ ಮೇಲಿನ ದಾಳಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.