ನ್ಯೂಸ್ ನಾಟೌಟ್: ಒಮ್ಮೊಮ್ಮೆ ನಮ್ಮ ಜನ ಹೊಟ್ಟೆಗೆ ಅನ್ನ ತಿಂತಾರಾ..? ಅಥವಾ ಇನ್ನೇನಾದರೂ ತಿಂತಾರಾ ಅನ್ನೋದೇ ಗೊತ್ತಾಗಲ್ಲ. ರಸ್ತೆಯ ಎಲ್ಲೆಂದರಲ್ಲಿ ಕಸ ಬಿಸಾಡೋದು, ಕೊಳತೆ ವಸ್ತುಗಳನ್ನು ರಾತ್ರೋ ರಾತ್ರಿ ಬಿಸಾಕಿ ಓಡೋದನ್ನು ರೂಢಿ ಮಾಡಿಕೊಂಡಿದ್ದಾರೆ.
ಕೆಲವರು ಮಾಡುವ ಈ ಅವಿವೇಕಿತನಕ್ಕೆ ಇಡೀ ಪರಿಸರವೇ ನಾಶವಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ರಸ್ತೆ ಬದಿಯಲ್ಲಿ ಕಸಗಳನ್ನು ಎಸೆದು ಹೋಗುತ್ತಿರುವುದು ದೊಡ್ಡ ದುರಂತವೇ ಸರಿ. ಅಂತಹುದೇ ಒಂದು ಅವಿವೇಕಿ ತನ ಇದೀಗ ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಾಣಸಿಗುತ್ತಿದೆ. ಸೋಣಂಗೇರಿಯಿಂದ 1 ಕಿ.ಮೀ ದೂರದಲ್ಲಿರುವ ಕುಕ್ಕಂದೂರು ತಮಿಳು ಪುನರ್ವಸತಿ ಗೃಹದ ಪಕ್ಕದಲ್ಲಿ ಹಾದು ಹೋಗುವ ಸುಬ್ರಹ್ಮಣ್ಯ -ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಭಾರಿ ಕಸದ ರಾಶಿ ಬಿದ್ದಿದೆ. ಇಷ್ಟೊಂದು ಕಸ ರಾಶಿ ಬಿದ್ದರೂ ಈ ಕಡೆ ಯಾರೂ ಗಮನ ಕೊಡುತ್ತಿಲ್ಲ ಅನ್ನುವ ಕೂಗು ಕೇಳಿ ಬರುತ್ತಿದೆ. ಆದಷ್ಟು ಬೇಗ ಸ್ಥಳೀಯಾಡಳಿತ ಇದನ್ನು ತೆರವುಗೊಳಿಸಬೇಕೆಂದು ಸುತ್ತಮುತ್ತಲಿನ ಜನ ಒತ್ತಾಯಿಸುತ್ತಿದ್ದಾರೆ.