ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಬರೋಬ್ಬರಿ 270 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ದ್ವಿಚಕ್ರ ವಾಹನದ ಒಡತಿಗೆ ಬೆಂಗಳೂರು ಸಂಚಾರ ಠಾಣೆ ಪೊಲೀಸರು 1.36 ಲಕ್ಷ ರೂಪಾಯಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಕೆಎ-03 ಜೆ.ಇ-5705 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಮಾಲೀಕರಾದ ಮಹಿಳೆಗೆ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ದೃಶ್ಯಗಳನ್ನು ಸೆರೆ ಹಿಡಿದಿರುವ ಫೋಟೋ ಸಮೇತ ನೋಟಿಸ್ ಕಳುಹಿಸಿದ್ದಾರೆ.
ನಗರದ ಸುಬ್ಬಯ್ಯನಪಾಳ್ಯ, ಕಾಕ್ಸ್ಟೌನ್ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡಿದ್ದ ಈ ಮಹಿಳೆ, ಹಲವು ಬಾರಿ ನಿಯಮಗಳನ್ನು ಉಲ್ಲಂ ಸಿದ್ದರು. ಅಲ್ಲದೇ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಕೂಡ ಹಾಕಿರಲಿಲ್ಲ. 50 ಸಾವಿರ ರೂಪಾಯಿಗಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ ವ್ಯಕ್ತಿಗಳ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಈ ದ್ವಿಚಕ್ರ ವಾಹನದ ಮಾಲೀಕರು ಇದ್ದಾರೆ. ಹೀಗಾಗಿ, ಆಕೆಗೆ 1.36 ಲಕ್ಷ ರೂ.ದಂಡ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.