ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡದಲ್ಲಿ ಜಿಲ್ಲಾಡಳಿತವು ಚೆಕ್ಪೋಸ್ಟ್ಗಳಲ್ಲಿ ಕಣ್ಗಾವಲು ಇರಿಸಿದೆ.
ಜಿಲ್ಲಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 23 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಹಣ ಸಾಗಾಟದ ಮೇಲೆ ತ್ರೀವ ನಿಗಾ ಇರಿಸಲಾಗಿದೆ. ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೂ ಒಂದೇ ದಿನ ಚುನಾವಣೆ ನಡೆಯುತ್ತಿದೆ. ಈ ಕಾರಣದಿಂದಾಗಿ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ದ.ಕ. ಜಿಲ್ಲೆಯ 23 ಚೆಕ್ಪೋಸ್ಟ್ಗಳಲ್ಲಿ ಅಂತರ್ ರಾಜ್ಯ 9, ಅಂತರ್ ರಾಜ್ಯ 7 ಮತ್ತು ಸ್ಥಳೀಯ 7ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ದ.ಕ.ದ ಗಡಿಭಾಗಗಳಲ್ಲಿ ತಾತ್ಕಾಲಿಕವಾಗಿ ತಗಡ್ಶೀಟ್ನ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿತ್ತು. ಅದನ್ನೇ ಈಗ ಲೋಕಸಭಾ ಚುನಾವಣೆಗೂ ಬಳಸಿಕೊಳ್ಳಲಾಗಿದೆ.