ನ್ಯೂಸ್ ನಾಟೌಟ್: ಚುನಾವಣಾ ಆಯೋಗದ ಪ್ರಕಾರ ವೋಟ್ ಹಾಕಲು ನಾವು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ರೇಷನ್ ಕಾರ್ಡ್ ಸೇರಿದಂತೆ 13 ಇತರ ವೈಯಕ್ತಿಕ ಪ್ರಮಾಣ ಪತ್ರಗಳನ್ನು ಒದಗಿಸಬಹುದು ಆ ಮೂಲಕ ವೋಟ್ ಮಾಡಬಹುದು.
ಒಂದು ವೇಳೆ ವೋಟಿಂಗ್ ಕಾರ್ಡ್ ಕಳೆದು ಹೋದರೆ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ಅಥವಾ ತಹಶೀಲ್ದಾರ್ ಕಛೇರಿಯಲ್ಲಿರುವ ಚುನಾವಣಾ ವಿಭಾಗಕ್ಕೆ ವರದಿ ಸಲ್ಲಿಸಿ. ಹೊಸ ಕಾರ್ಡ್ಗೆ ಮನವಿ ಮಾಡಬೇಕು. ಆಗ ನಿಮಗೊಂದು ತಾತ್ಕಾಲಿಕ ಸಂಖ್ಯೆಯನ್ನು ಇಲಾಖೆ ನೀಡುತ್ತದೆ. ಅದನ್ನು ಮತದಾರರ ಪಟ್ಟಿಯಲ್ಲಿ ಗಮನಿಸಿ ನಂತರ ಆ ಸಂಖ್ಯೆಯ ಸಹಾಯದಿಂದಲೇ ವೋಟ್ ಹಾಕಬಹುದು.
ವೋಟಿಂಗ್ ಕಾರ್ಡ್ನಲ್ಲಿ ಅಡ್ರೆಸ್ ತಿದ್ದುಪಡಿ ಮಾಡಬೇಕೆಂದು ಹಲವು ನಗರವಾಸಿಗಳು ಬಯಸುತ್ತಾರೆ. ಅವರು ಆಧಾರ್ ಕಾರ್ಡ್ ನ ಅಡ್ರೆಸ್ ಚೇಂಜ್ ಮಾಡಿಕೊಂಡು ನಂತರ ವೋಟಿಂಗ್ ಕಾರ್ಡ್ನ ಅಡ್ರೆಸ್ ಚೇಂಜ್ ಮಾಡಬೇಕಾಗುತ್ತದೆ. ಈಗ ಇದೆಲ್ಲವೂ ಆನ್ ಲೈನ್ ಅಲ್ಲಿ ಲಭ್ಯವಿದೆ.