ನವದೆಹಲಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ವಲಯದಲ್ಲಿ ತೈಲ ದರ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ.
ಇದಕ್ಕೆ ಮುನ್ಸೂಚನೆ ಎಂಬಂತೆ ಪಾಕಿಸ್ತಾನದಲ್ಲಿ ಎಲ್ಲಾ ತೈಲ ಉತ್ಪನ್ನಗಳ ಬೆಲೆ ಸೋಮವಾರದಿಂದ 8 ರಿಂದ 10 ಪಾಕಿಸ್ತಾನಿ ರೂಪಾಯಿಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿನ ಹೆಚ್ಚಳ, ಹೆಚ್ಚುವರಿ ಪೆಟ್ರೋಲಿಯಂ ಲೆವಿ ಅನ್ವಯ ಮತ್ತು ಕರೆನ್ಸಿ ಅಪಮೌಲ್ಯೀಕರಣವು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಇಂತಹ ಏರಿಕೆ ಮುಂದಿನ ದಿನಗಳಲ್ಲಿ ಭಾರತಕ್ಕೂ ತಟ್ಟಬಹುದು ಎನ್ನುವ ಆತಂಕ ಶುರುವಾಗಿದೆ.