ನ್ಯೂಸ್ ನಾಟೌಟ್: ಜನಸಾಮಾನ್ಯರಿಗೆ ಯದುವೀರ್ ಸಿಗ್ತಾರಾ? ರಾಜವಂಶದಿಂದ ಬಂದವರು ಜನರ ಕೈಗೆ ಸಿಗ್ತಾರೆ ಎಂಬ ಪ್ರಶ್ನೆಗೆ ಯಾರದರೂ ತಮ್ಮ ಎದೆ ಮುಟ್ಟಿಕೊಂಡು ಹೌದು ಎಂಬ ಉತ್ತರ ಸಿಕ್ಕರೆ ಮತ ಹಾಕಿ ಎಂದು ಕೊಡಗಿನ ವಿರಾಜಪೇಟೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಆಯ್ಕೆಯಾಗಿ ಬಂದ ವ್ಯಕ್ತಿ ಪ್ರತಾಪ್ ಸಿಂಹ ಹಲವಾರು ಕೆಲಸ ಮಾಡ್ತಾ ಇದ್ದರು. ಅವರಿಗೆ ಕಾರಣವೇ ನೀಡದೇ ವಿನಾಕಾರಣ ಎತ್ತಿ ದೂರ ಹಾಕಿದ್ದಾರೆ. ಆಸಕ್ತಿ ಇಲ್ಲದೇ ಇದ್ದವರನ್ನು ರಾಜಕೀಯಕ್ಕೆ ಕರೆತರುವ ಕೆಲಸ ಮಾಡಿದ್ದಾರೆ ಎಂದು ಸಂಸದರ ಪರ ಮಾತನಾಡಿದ್ದಾರೆ. ಸ್ಥಳೀಯವಾಗಿ 24/7 ಜನರೊಂದಿಗೆ ಇದ್ದರೂ ಅವರ ನಿರೀಕ್ಷೆಗಳನ್ನು ಮುಟ್ಟಲು ಸಾದ್ಯವಾಗುತ್ತಿಲ್ಲ.
ಜನರು ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದು ಬಯಸುತ್ತಾರೆ. ಆ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುದು ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ. ಈ ಕೆಲಸ ರಾಜಮನೆತನದಿಂದ ಬಂದವರ ಬಳಿ ಆಗುತ್ತಾ? ಈ ರೀತಿ ಜನ ಆಲೋಚಿಸುತ್ತಿದ್ದಾರೆ. ಯಾರು ಜನಸಾಮಾನ್ಯರ ಕೈಗೆ ಸಿಗ್ತಾರೆ, ಯಾರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಈಗ ಅವರ ಬಾಯಿಯಲ್ಲೇ ಬರುತ್ತಿದೆ. ಏಸಿ ರೂಮ್ನಲ್ಲಿ ಇದ್ದವರು ಪೊಲೀಸ್ ಠಾಣೆಗೆ ಬರುತ್ತಾರಾ? ಜನರಿಗೆ ಸಮಸ್ಯೆಯಾಗುವಾಗ ಅವರು ಬರುತ್ತಾರಾ? ಎಂದು, ಬಿಜೆಪಿ ಅಭ್ಯರ್ಥಿ ಯದುವೀರ್ ಹೆಸರು ಹೇಳದೆ ಪೊನ್ನಣ್ಣ ವಾಗ್ದಾಳಿ ನಡೆಸಿದ್ದಾರೆ.