ನ್ಯೂಸ್ ನಾಟೌಟ್ : ಅವಳಿ ಮಕ್ಕಳಿಗೆ ಜನ್ಮ ನೀಡುವಾಗ ಎರಡು ಮೂರು ನಿಮಿಷ ಅಂತರವಾಗುತ್ತೆ ಅನ್ನೋದರ ಬಗ್ಗೆ ಕೇಳಿದ್ದೇವೆ.ಆದರೆ ಇಲ್ಲೊಂದೆಡೆ ಮೊದಲ ಮಗು ಜನಿಸಿದ 22 ದಿನಗಳ ನಂತರ ಮತ್ತೊಂದು ಮಗು ಜನಿಸಿರುವ ಅಪರೂಪದ ಘಟನೆ ಬಗ್ಗೆ ವರದಿಯಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಇಂಗ್ಲೆಂಡ್ ನಲ್ಲಿ.
ಹೌದು, ಕೈಲಿ ಡಾಯ್ಲ್ ಎಂಬ ಮಹಿಳೆ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಕೇವಲ 22 ದಿನಗಳ ಅಂತರದಲ್ಲಿ ಮಕ್ಕಳಿಬ್ಬರೂ ಹುಟ್ಟಲು ಹೇಗೆ ಸಾಧ್ಯ ಎಂಬುದು ಈಗ ಚರ್ಚೆಯ ವಿಷಯವಾಗಿದೆ.ಈಕೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ಮಗುವಿಗೆ ಜನ್ಮ ನೀಡಿದ ವೇಳೆ, ಮಗು ಅದಾಗಲೇ ಸತ್ತಿರುವುದಾಗಿ ವೈದ್ಯರು ಘೋಷಿಸಿದ್ದರು. ಹೊಕ್ಕುಳಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿತ್ತು.
ಎರಡನೇ ಮಗು ಸಂಪೂರ್ಣವಾಗಿ ಆರೋಗ್ಯವಾಗಿ ಜನಿಸಲಿ ಎಂದು ಕೈಲಿ ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಹೆರಿಗೆ ನೋವು ನಿಂತಿದ್ದ ಕಾರಣ ಎರಡು ದಿನಗಳಾದರೂ ಹೆರಿಗೆ ನೋವು ಕಾಣಿಸದೇ ಇರುವ ಕಾರಣ ವೈದ್ಯರು ಕೈಲಿಯನ್ನು ಮನೆಗೆ ಕಳುಹಿಸಿದ್ದರು. ಆದರೆ 22 ದಿನಗಳ ಬಳಿಕ ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಎರಡನೇ ಮಗುವಿನ ಜನನವಾಗಿದೆ.
—————