ನ್ಯೂಸ್ ನಾಟೌಟ್ :ಗಾಡಿ ಓಡಿಸುವಾಗ ನಿಯಂತ್ರಣ ತಪ್ಪ ಬಾರದು. ಮೊಬೈಲ್ಗಳನ್ನು ಉಪಯೋಗಿಸಬಾರದು ಎಂಬುದರ ಬಗ್ಗೆ ವಾಹನ ಸವಾರರರಿಗೆ ಎಷ್ಟೇ ಪಾಠ ಹೇಳಿದರೂ ಈ ಬಗ್ಗೆ ಕ್ಯಾರೇ ಅನ್ನದವರೇ ತುಂಬಾ ಮಂದಿ. ಸರ್ಕಾರ ಕೂಡ ಈ ಕುರಿತು ಜಾಗೃತಿ ಕಾರ್ಯಕ್ರಮ ಕೂಡ ಮಾಡ್ತಿದೆ. ಹೀಗಿದ್ದರೂ ಕೆಲವರು ಮಾತೇ ಕೇಳೋದಿಲ್ಲ. ಮೊನ್ನೆಯಷ್ಟೇ ಮಹಿಳೆಯೋರ್ವಳು ಬೆಂಗಳೂರಲ್ಲಿ ಗಾಡಿ ಓಡಿಸುವಾಗ ಫೋನ್ನಲ್ಲಿ ಮಾತನಾಡಲು ಎಕ್ಸ್ಟ್ರಾಡಿನರಿ ಪ್ಲಾನ್ ಮಾಡಿದ್ದು ಇದೀಗ ಸಿಕ್ಕಿ ಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ.
ಮಹಿಳೆ ಬೈಕ್ನಲ್ಲಿ ಚಲಿಸುತ್ತಾ ಇರಬೇಕಾದರೆ ಯಾರೋ ಒಬ್ಬರು ಇದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.ಈ ವಿಡಿಯೋ ಎಲ್ಲೆಡೆ ಭಾರಿ ವೈರಲ್ ಕೂಡ ಆಗಿತ್ತು.ಸ್ಕೂಟಿ ಓಡಿಸುತ್ತಿದ್ದ ಮಹಿಳೆ ಫೋನ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದಳು. ತಲೆಗೆ ವೇಲ್ (ದುಪ್ಪಟ್ಟ) ಬಿಗಿದು, ಕಿವಿಯೊಳಗೆ ಮೊಬೈಲ್ ಸಿಕ್ಕಿಸಿಕೊಂಡು ಮಾತನಾಡುತ್ತ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಸ್ಕೂಟಿ ಓಡಿಸ್ತಿದ್ದಳು.ಇದನ್ನು ಗಮನಿಸಿದ ನೆಟ್ಟಿಗರು ಕೆಂಡಾಮಂಡಲರಾಗಿದ್ದು ಮಾತ್ರವಲ್ಲದೇ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ವಿಡಿಯೋವನ್ನು ಸೋಶಿಯಲ್ ಮೀಡಿಯಾ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಹೆಲ್ಮೆಟ್ ಇಲ್ಲದೇ ಮೊಬೈಲ್ನಲ್ಲಿ ಮಾತನಾಡುತ್ತ ಹೋಗ್ತಿದ್ದ ಮಹಿಳೆಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಗಾಡಿಗೆ ಇನ್ಶ್ಯುರೆನ್ಸ್, ಲೈಸೆನ್ಸ್ ಕೂಡ ಇಲ್ಲದಿರೋದು ಗೊತ್ತಾಗಿದೆ. ಹೀಗಾಗಿ ಪೊಲೀಸರು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.