ನ್ಯೂಸ್ ನಾಟೌಟ್: ಉಚಿತ ಸ್ಕೀಂಗಳನ್ನು ತಂದು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಹಾದಿಯನ್ನೇ ಹಲವರು ಅನುಸರಿಸುತ್ತಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ತನ್ನನ್ನು ಗೆಲ್ಲಿಸಿದರೆ ರಿಯಾಯಿತಿ ದರದಲ್ಲಿ ಮದ್ಯವನ್ನು ಮನೆಬಾಗಿಲಿಗೆ ತಲುಪಿಸುವ ಭರವಸೆ ನೀಡಿ ಸುದ್ದಿಯಾಗಿದ್ದಾರೆ.
ಚಂದ್ರಾಪುರ ಜಿಲ್ಲೆಯ ಚಿಮೂರ್ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವತ್ 2024 ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಸಬ್ಸಿಡಿ ದರದಲ್ಲಿ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಖಿಲ ಭಾರತ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವತ್ ತಮ್ಮ ಬಡ ಮತದಾರರಿಗೆ ಅಸಾಂಪ್ರದಾಯಿಕ ಚುನಾವಣಾ ಭರವಸೆಯೊಂದಿಗೆ ಸ್ಪರ್ಧೆಗಿಳಿದಿದ್ದಾರೆ.
ವನಿತಾ ರಾವತ್ ಈ ಕ್ಷೇತ್ರದಿಂದ ಆಯ್ಕೆಯಾದರೆ ಪ್ರತಿ ಹಳ್ಳಿಯಲ್ಲಿ ಬಿಯರ್ ಬಾರ್ ಗನ್ನು ತೆರೆಯುವುದಲ್ಲದೇ ಸಂಸದರ ನಿಧಿಯಿಂದ ಬಡವರಿಗೆ ಉಚಿತವಾಗಿ ಆಮದು ಮಾಡಿದ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಹೇಳಿದ್ದಾರೆ. ಎಲ್ಲಿ ಹಳ್ಳಿ ಇದೆಯೋ ಅಲ್ಲಿ ಬಿಯರ್ ಬಾರ್ ಇದೆ. ಇವು ನನ್ನ ಚುನಾವಣಾ ವಿಷಯಗಳು ಎಂದು ವನಿತಾ ರಾವತ್ ಹೇಳಿದ್ದಾರೆ. ಪಡಿತರ ವ್ಯವಸ್ಥೆಯ ಮೂಲಕ ಆಮದು ಮಾಡಿದ ಮದ್ಯದ ಭರವಸೆ ನೀಡಿದ ರಾವತ್, ಕುಡುಕ ಮತ್ತು ಮಾರಾಟಗಾರ ಪರವಾನಗಿ ಹೊಂದಿರಬೇಕು ಎಂದು ಹೇಳಿದ್ದಾರೆ ಎಂಬುದು ಚರ್ಚೆಗೆ ಕಾರಣವಾಗಿದೆ.