ನ್ಯೂಸ್ ನಾಟೌಟ್ : ತಾಯಿಯೋರ್ವಳು ಒಂದು ವರ್ಷದ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ (Self harming) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಮಂಗಳೂರು (Mangaluru News) ಹೊರವಲಯದಿಂದ ವರದಿಯಾಗಿದೆ. ಅಡ್ಯಾರ್ ಡ್ಯಾಂ ಬಳಿಯ ನೇತ್ರಾವತಿ ನದಿಯಲ್ಲಿ (Netravathi River) ಈ ಘಟನೆ ನಡೆದಿದ್ದು,ಅಡ್ಯಾರ್ ಪದವು ನಿವಾಸಿ ಚೈತ್ರಾ ಹಾಗೂ ಒಂದು ವರ್ಷದ ಮಗು ದಿಯಾಂಶ್ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ಗುರುವಾರ ಚೈತ್ರ ಮಗುವಿನ ಹುಟ್ಟುಹಬ್ಬ ಆಚರಣೆ ನಡೆದಿತ್ತು. ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಲಾಗಿತ್ತು.ಮರುದಿನ ಮಧ್ಯಾಹ್ನದ ನಂತರ ತಾಯಿ-ಮಗು ನಾಪತ್ತೆಯಾಗಿದ್ದರು.ಆದರೆ ಸಂಬಂಧಿಕರು ಮನೆ ಸುತ್ತಮುತ್ತ ಎಷ್ಟೇ ಹುಡಕಾಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.ಕಾಣದಿದ್ದಾಗ ಸಾಮಾಜಿಕ ಜಾಲತಾಣದ ಮೂಲಕ ಹುಡುಕಾಟಕ್ಕೆ ಮನವಿ ಮಾಡಿದ್ದರು.ಆದರೆ ಇಂದು ಹರೇಕಳ ಸೇತುವೆ ಸಮೀಪ ತಾಯಿ-ಮಗುವಿನ ಮೃತದೇಹ ಪತ್ತೆಯಾಗಿದೆ.ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.