ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಆರ್ ಪದ್ಮರಾಜ್ ನೇತೃತ್ವದಲ್ಲಿ ಸುಳ್ಯದ ಹಿಂದುಸ್ಥಾನ್ ಸಿಟಿ ಡೆವಲಪ್ಪರ್ಸ್ನಲ್ಲಿರುವ ಪಕ್ಷದ ಚುನಾವಣಾ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಯು ಮಾ.೩೦ ರಂದು ನಡೆಯಿತು.
ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಕುದ್ರೋಳಿ ದೇವಾಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲಾ ವರ್ಗದ ಜನರಿಗೂ ಒಳಿತನ್ನು ಮಾಡಿದ್ದಾರೆ. ಜೊತೆಗೆ ಉಚಿತ ನೋಟರಿ ಕೆಲಸ ಮಾಡುತ್ತಾ ಹಲವಾರು ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾ ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರನ್ನು ಗೆಲ್ಲಿಸಲು ಪಕ್ಷದ ಸೇನಾನಿಗಳಾಗಿ ಕೆಲಸ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ರಾಮನಾಥ ರೈ ಮತ್ತು ಪದ್ಮರಾಜ್ ಶ್ರೀಕೃಷ್ಣ ಮತ್ತು ಅರ್ಜುನನಾಗಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾಗಿ ಈ ಭಾರಿಯ ಚುನಾವಣೆಯಲ್ಲಿ 20 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಕಾಣುತ್ತೇವೆ ಎಂದರು. ಬಿಎಸ್ ವೈ ಕುಟುಂಬದ ವಿರುದ್ದ ಬಿಜೆಪಿ ನಾಯಕರೆ ಈ ಭಾರಿ ತಿರುಗಿ ಬಿದ್ದಿದ್ದು ಅವರ ಸರ್ವಾಧಿಕಾರಿ ಧೋರಣೆಯನ್ನು ಸಿ ಟಿ ರವಿ, ಸದಾನಂದ ಗೌಡ, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರನ್ನೆ ಕಡೆಗಣನೆ ಮಾಡಲಾಗಿದೆ. ಅಲ್ಲದೆ ಆರು ಭಾರಿ ಗೆದ್ದಿರುವ ಶಾಸಕ ಎಸ್ ಅಂಗಾರರಿಗೆ ಟಿಕೇಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ರಮಾನಾಥ ರೈ, ಐವನ್ ಡಿಸೋಜ, ಧನಂಜಯ ಅಪ್ಪಂಗಾಯ, ಪಿ ಸಿ ಜಯರಾಮ , ಮಮತ ಗಟ್ಟಿ, ಕೃಷ್ಣಪ್ಪ, ಡಾ.ರಘು, ಇಸಾಕ್ ಸಾಹೇಬ್, ವೆಂಕಪ್ಪ ಗೌಡ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.