ಮಳವಳ್ಳಿ: ಕಳ್ಳತನಕ್ಕೆಂದು ಬೀಗ ಮುರಿದು ಅಂಗನವಾಡಿಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ3 ಪುಟದ ಕಥೆ ಹಾಗೂ ಕವನ ಬರೆದಿಟ್ಟು ಹೋದ ಸ್ವಾರಸ್ಯಕರ ಘಟನೆ ಮಳ್ಳವಳ್ಳಿಯ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ.
ಮಧ್ಯರಾತ್ರಿ ಕಳ್ಳನೊಬ್ಬ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ್ದಾನೆ. ಬೀರು ಬಾಗಿಲು ತೆರೆದಾಗ ಆತನಿಗೆ ಏನೂ ಸಿಗಲಿಲ್ಲ. ಬೆಲೆ ಬಾಳುವ ವಸ್ತುಗಳು ಸಿಗಲಿಲ್ಲ ಎನ್ನುವ ಬೇಸರದಿಂದ ಸುಮ್ಮನೆ ಕುಳಿತ. ರಾತ್ರಿಯಿಡೀ ಅಲ್ಲಿಯೇ ಉಳಿಯುವುದಕ್ಕೆ ನಿರ್ಧರಿಸಿದ ಆತ ಮಕ್ಕಳಿಗಾಗಿ ತಂದಿಟ್ಟಿದ್ದ ಅಡುಗೆ ಸಾಮಾನಿನಲ್ಲಿ ಪುಳಿಯೊಗರೆ ತಯಾರಿಸಿಕೊಂಡು ತಿಂದಿದ್ದಾನೆ. ಬಳಿಕ ಅಂಗನವಾಡಿಯಲ್ಲಿದ್ದ ನೋಟ್ ಬುಕ್ ವೊಂದರಲ್ಲಿ 3 ಪುಟದ ಕಥೆ ಹಾಗೂ ಕವನ ಬರೆದಿಟ್ಟಿದ್ದಾನೆ. ಬೆಳಗ್ಗೆ ಬಂದು ಸಿಬ್ಬಂದಿ ನೋಡಿದಾಗ ಎಲ್ಲ ವಿಚಾರಗಳು ಬೆಳಕಿಗೆ ಬಂದಿದೆ.