ನ್ಯೂಸ್ ನಾಟೌಟ್: ವನ್ಯಜೀವಿಗಳ ವಿಚಾರದಲ್ಲಿ ಕೆಲವೊಮ್ಮೆ ಬಲು ಅಪರೂಪದ ದೃಶ್ಯಗಳೂ ಕಣ್ಣಿಗೆ ಕಾಣಸಿಗುತ್ತವೆ. ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.ಬೇಟೆಯಲ್ಲಿ ಪಳಗಿರುವ ಹುಲಿಗಳ ಇತರ ಕೌಶಲ್ಯಗಳೂ ಅದ್ಭುತ ಎಂದರೆ ತಪ್ಪಿಲ್ಲ. ಅವಶ್ಯಕತೆ ಇದ್ದಲ್ಲಿ ಹುಲಿಗಳು ಅದ್ಭುತವಾಗಿ ಜಂಪ್ ಮಾಡುವ ಸಾಮರ್ಥ್ಯವನ್ನೂ ಹೊಂದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ದೃಶ್ಯ ಸೆರೆಯಾಗಿದೆ.
ಸದ್ಯ ಹುಲಿಯೊಂದು ಅದ್ಭುತವಾಗಿ ಲಾಂಗ್ ಜಂಪ್ ಮಾಡುವ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 12 ಸೆಕೆಂಡಿನ ವಿಡಿಯೋ ಕ್ಲಿಪ್ ಇದು.
ಜೌಗು ಪ್ರದೇಶದಲ್ಲಿ ಹುಲಿಯೊಂದು ಹೆಜ್ಜೆ ಇಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಬರುವ ಹುಲಿ ಅದ್ಭುತವಾಗಿ ಜಂಪ್ ಮಾಡಿ ನೀರಿನಿಂದ ತಪ್ಪಿಸಿ ಇನ್ನೊಂದು ಬದಿಗೆ ಹೋಗಿದೆ. ಈ ದೃಶ್ಯವೇ ರೋಮಾಂಚನಕಾರಿಯಾಗಿದೆ. ಪಶ್ಚಿಮ ಬಂಗಾಳದ ಸುಂದರಬನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗಿದೆ.