ನ್ಯೂಸ್ ನಾಟೌಟ್: ರಾಜ್ಯಕ್ಕೆ ವಿದ್ಯುತ್ ಕೊರತೆಯ ಶಾಕ್ ಎದುರಾಗಿದ್ದು, ಇದಕ್ಕೆ ಜಲಕ್ಷಾಮ ಕಾರಣ ಎನ್ನಲಾಗಿದೆ. ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ನ ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ಬರಗಾಲ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಈಗ ಬಿರು ಬೇಸಿಗೆಯಲ್ಲಿ ವಿದ್ಯುತ್ ಕ್ಷಾಮ ಸಹ ಎದುರಾಗುವ ಭೀತಿ ಉಂಟಾಗಿದೆ. (electricity)
ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಪೂರೈಸುವ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಆರ್ಟಿಪಿಎಸ್ನ ಎಂಟು ಘಟಕಗಳಲ್ಲಿ ನಾಲ್ಕು ಘಟಕ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಿವೆ. ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ ಘಟಕಗಳು ಸ್ಥಗಿತಗೊಂಡಿವೆ. (karnataka)
1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೇಂದ್ರದಲ್ಲಿ ಈಗ ಕೇವಲ 665 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಕೇಂದ್ರದ 1,2,3 ಹಾಗೂ 6 ನೇ ಘಟಕ ಬಂದ್ ಆಗಿದ್ದು, ಬೇಸಿಗೆಯಲ್ಲಿ ಹೆಚ್ಚು ಒತ್ತಡ ಇರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲೇ ಉತ್ಪಾದನೆ ಕುಂಠಿತವಾಗಿದೆ. ನೀರಿನ ಸಮಸ್ಯೆ ಬೆನ್ನಲ್ಲೆ ತಾಂತ್ರಿಕ ಸಮಸ್ಯೆಯಿಂದ ಘಟಕಗಳು ಬಂದ್ ಆಗಿದ್ದು, ಬೇಸಿಗೆಯಲ್ಲಿ ವಿಪರೀತ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಿದೆ ಎಂದು ವರದಿ ತಿಳಿಸಿದೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/