ನ್ಯೂಸ್ ನಾಟೌಟ್ : ಮಾರ್ಚ್ 16ರಂದು ಇಡೀ ರಾಜ್ಯದಲ್ಲೇ ಭಾರಿ ಚರ್ಚೆಗೆ ಗ್ರಾಸವಾದ ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ನಕ್ಸಲರು ಪತ್ತೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ.ಮೊನ್ನೆ (ಮಾರ್ಚ್ 27) ಮಧ್ಯಾಹ್ನ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು, ಆಕೆ ನಕ್ಸಲ್ ಆಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು.ಆದರೆ ಆ ಮಹಿಳೆ ನಕ್ಸಲ್ ಅಲ್ಲ ಎಂಬುದು ಪೊಲೀಸ್ ತನಿಖೆಯಿಂದ ಇದೀಗ ದೃಢಪಟ್ಟಿದೆ.
ಮಾರ್ಚ್ 27ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಕೂಜಿಮಲೆ ಎಸ್ಟೇಟ್ನ ರಬ್ಬರ್ ತೋಟದಲ್ಲಿ ಬುಧವಾರ ಮಧ್ಯಾಹ್ನ ವೇಳೆಗೆ ಅಪರಿಚಿತ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದರು. ಎಸ್ಟೇಟ್ನವರು ಅನುಮಾನಗೊಂಡು ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದರು.ಕೂಡಲೇ ಸ್ಥಳಕ್ಕೆ ಧಾವಿಸಿದ ಎಎನ್ಎಫ್ ತಂಡ ಹಾಗೂ ಪೊಲೀಸರು ಶೋಧ ನಡೆಸಿದ್ದರು.ಕಾರ್ಯಾಚರಣೆ ವೇಳೆ ಅಪರಿಚಿತ ಮಹಿಳೆ ಪತ್ತೆಯಾಗಿದ್ದರು.ಅವರು ಎಸ್ಟೇಟ್ನಿಂದ ಕಾಡಿಗೆ ತೆರಳಿರೋದನ್ನು ನೋಡಿ ಎಸ್ಟೇಟ್ನಲ್ಲಿ ಕೆಲಸ ಮಾಡೋ ವ್ಯಕ್ತಿಗಳಿಗೆ ಸಂಶಯ ದಟ್ಟವಾಗಿ ಕಾಡತೊಡಗಿತು.
ಆದರೆ ಪೊಲೀಸರು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಆಕೆ ನಕ್ಸಲ್ ತಂಡಕ್ಕೆ ಸೇರಿದವರಲ್ಲ ಎಂಬುದು ದೃಢಪಟ್ಟಿದೆ. ಮಹಿಳೆಯನ್ನು ವಿಚಾರಿಸೋ ವೇಳೆ ಆಕೆ ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ.ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ, ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕೊಡಗು ಎಸ್.ಪಿ. ತಿಳಿಸಿದ್ದಾರೆ.
ಕೂಜಿಮಲೆ ಎಸ್ಟೇಟ್ನಲ್ಲಿ ಶಂಕಿತ ಮಹಿಳೆಯ ಓಡಾಟ ಪತ್ತೆಯಾಗಿರುವ ವಿಷಯ ತಿಳಿದ ಎಎನ್ಎಫ್ ಹಾಗೂ ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಎಸ್ಟೇಟ್ಗೆ ಭೇಟಿ ನೀಡಿ ಪರಿಶೀಲಿಸಿದ್ದು,ಆಕೆಯನ್ನು ಪತ್ತೆಹಚ್ಚಿ ಮಡಿಕೇರಿಗೆ ಕರೆತಲಾಗಿದೆ. ರಾತ್ರಿ 2 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಮೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು. ವಿಚಾರಣೆ ಬಳಿಕ ಆ ಮಹಿಳೆ ನಕ್ಸಲ್ ತಂಡಕ್ಕೆ ಸೇರಿದವರು ಅಲ್ಲ ಎಂದು ದೃಢಪಟ್ಟಿದೆ. ಕೊಡಗು ಜಿಲ್ಲಾ ಪೊಲೀಸ್ ಹಾಗೂ ಎಎನ್ಎಫ್ ತಂಡ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಾರ್ಚ್ 16ರಿಂದ ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿಭಾಗವಾದ ಕೂಜಿಮಲೆಯಲ್ಲಿ ನಕ್ಸಲ್ ಪತ್ತೆ ಎಂಬ ವಿಚಾರ ರಾಜ್ಯಾದಾದ್ಯಂತ ಸುದ್ದಿಯಾದ ಬಳಿಕ ಹಾಗೂ ಚುನಾವಣೆ ದಿನಾಂಕವೂ ಸಮೀಪಿಸಿರೋದ್ರಿಂದ ನಿರಂತರ ಶೋಧ ಕಾರ್ಯ ನಡೆಯುತ್ತಲೇ ಇದೆ.ಈ ಮಧ್ಯೆ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದು ಕೂಡ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು.ಕೂಜಿಮಲೆ ಎಸ್ಟೇಟ್ ಸಮೀಪ ಅಂಗಡಿಗೆ ಹಾಗೂ ಐನೆಕಿದುನಲ್ಲಿರುವ ಮನೆಗೆ ಭೇಟಿ ನೀಡಿದ ಶಂಕಿತರ ತಂಡದಲ್ಲೂ ಮಹಿಳೆಯರು ಇದ್ದರು ಎಂಬ ಮಾಹಿತಿಯಿಂದ ಸಹಜವಾಗಿ ಸ್ಥಳೀಯರಲ್ಲಿ ಆತಂಕ ಮೂಡಿತ್ತು.