ನ್ಯೂಸ್ ನಾಟೌಟ್:ಬಿಗ್ಬಾಸ್ ಕನ್ನಡದ 10ನೇ ಆವೃತ್ತಿಯಲ್ಲಿ ಡ್ರೋನ್ ಪ್ರತಾಪ್ (Drone Prathap) ರನ್ನರ್ ಅಪ್ .ಇನ್ನು ನಿಮ್ಗೆಲ್ಲಾ ಗೊತ್ತೆ ಇದೆ ಡ್ರೋನ್ ಪ್ರತಾಪ್ ʻಬಿಗ್ ಬಾಸ್ʼ ಶೋದಲ್ಲಿ ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್ ಎಚ್ ಎಸ್ (HS Prayag) ಮೇಲೆ ಆರೋಪ ಮಾಡಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿ ನೋಟಿಸ್ ಕಳುಹಿಸಿದ್ದರು ಪ್ರಯಾಗ್.
ಇದಾದ ಬಳಿಕ ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ (Drone Prathap Controversy) ವಂಚಿಸುತ್ತಿದ್ದಾರೆ ಎಂದು ಕಳೆದ ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ದ ಆರ್.ಆರ್.ನಗರ ಠಾಣೆಯಲ್ಲಿ ಪ್ರಯಾಗ್ ಹಾಗೂ ತಂಡ ದೂರು ದಾಖಲಿಸಿತ್ತು. ಇದೀಗ ಡ್ರೋನ್ ಪ್ರತಾಪ್ (Drone Prathap Issue) ಕಳ್ಳಾಟವನ್ನು ಬಟಾಬಯಲು ಮಾಡಿದ್ದಾರೆ ಪ್ರಯಾಗ್. ಡ್ರೋನ್ ಪ್ರತಾಪ್ಗೆ ಡ್ರೋನ್ ತಯಾರಿಸಲು, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಮಾಹಿತಿ ಹಂಚಿಕೊಂಡಿದೆ.
ಪ್ರತಾಪ್ ಅವರ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಹೊಂದಿಲ್ಲ. ಜತೆಗೆ ಹೆಸರು ಸಹ ಇಲ್ಲ ಎಂದು ಈ ಮುಂಚೆಯೇ ಡಿಜಿಸಿಎ ಅಧಿಕೃತ ವೆಬ್ಸೈಟ್ನಿಂದ ಸ್ಪಷ್ಟವಾಗಿತ್ತು. ಡ್ರೋನ್ ಪ್ರತಾಪ್ಗೆ ಡ್ರೋನ್ ಲೈಸೆನ್ಸ್ ಇದೆಯಾ ಎಂದು ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿದ್ದರು ಪ್ರಯಾಗ್. ಜತೆಗೆ ಡಿಜಿಸಿಎ(ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್)ಗೆ ಆರ್ಟಿಐನಲ್ಲಿ ಮಾಹಿತಿ ಕೋರಲಾಗಿತ್ತು.ಇದೀಗ ಪ್ರತಾಪ್ಗೆ ಡ್ರೋನ್ ತಯಾರಿಸಲು, ಹಾರಿಸಲು ಮತ್ತು ಮಾರಲು ಯಾವುದೇ ಲೈಸೆನ್ಸ್ ಇಲ್ಲ ಎಂದು ಪ್ರಯಾಗ್ ರೈಟ್ ಟೂ ಇನ್ಫಾರ್ಮೇಶನ್ (ಆರ್ಟಿಐ) ಮೂಲಕ ಮಾಹಿತಿ ಪಡೆದಿದ್ದಾರೆ. ಡ್ರೋನ್ ಪ್ರತಾಪ್ಗೆ ಯಾವುದೇ ಪರವಾನಗಿ ಇಲ್ಲ ಎಂದು ಆರ್ಟಿಐ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.