ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ (NMC ) ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ಸದಾ ಬ್ಯುಸಿಯಾಗಿರ್ತಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ಶ್ರಮವಹಿಸುತ್ತಿರುವ ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವರ್ಗ ವಿದ್ಯಾರ್ಥಿಗಳನ್ನು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಅಂತೆಯೇ ಮಂಗಳವಾರ (ಮಾ.೨೬) ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜ್ಞಾನ ಸಂಘದ ಕಜಾಂಜಿ ನಿಶ್ಮಾ ಡಿ.ಸಿ, ಅಧ್ಯಕ್ಷ ಚರಣ್ ಎಂ, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥೆ ಹರ್ಷ ಕಿರಣ ಬಿ.ಪಿ ಮತ್ತು ಗಣಿತಶಾಸ್ತ್ರ ವಿಭಾಗ ಹರ್ಷಿತ ಕೆ ಕ್ವಿಜ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದರು. ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಉಷಾ ಎಂ ಪಿ ಮುಖ್ಯ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸತ್ಯಪ್ರಕಾಶ್ ಡಿ, ಉಪನ್ಯಾಸಕಿ ಅಶ್ವಿನಿ ಕೆ ಸಿ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೇಲ್ತಡ್ಕ, ಉಪನ್ಯಾಸಕಿ ಕೃತಿಕಾ ಕೆ ಜೆ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಬಿ, ಉಪನ್ಯಾಸಕ ಅಜಿತ್ ಕುಮಾರ್ ಎಸ್ ಬಿ, ರಸಾಯನ ಶಸ್ತ್ರ ಉಪನ್ಯಾಸಕಿ ಪಲ್ಲವಿ ಕೆ ಎಸ್ ಮತ್ತು ಕಛೇರಿ ಸಿಬ್ಬಂದಿ ಶಿವಣ್ಣ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಕಾರ್ಯದರ್ಶಿ ಕೀರ್ತಿಕ ಟಿ ವಂದಿಸಿದರು.
ಫಲಿತಾಂಶ ಇಂತಿದೆ: ಕೀರ್ತನ್ (ಪ್ರಥಮ ಬಿಎಸ್ಸಿ) ಮತ್ತು ಕಾಸರಗೋಡು ಮಿಂಚಿಪದವಿನ ಸುಶ್ಮಿತಾ (ತೃತೀಯ ಬಿಎಸ್ಸಿ) ತಂಡವು ಪ್ರಥಮ ಸ್ಥಾನ, ಅನುಶ್ರೀ ಪಿ (ತೃತೀಯ ಬಿಎಸ್ಸಿ) ಮತ್ತು ಸಚಿತ್ರ ಟಿ (ಪ್ರಥಮ ಬಿಎಸ್ಸಿ) ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು. ಯಶಿಕಾ (ತೃತೀಯಾ ಬಿಎಸ್ಸಿ) ಮತ್ತು ಪ್ತಿ ಎಲ್ (ಪ್ರಥಮ ಬಿಎಸ್ಸಿ) ತಂಡ ತೃತೀಯ ಸ್ಥಾನ ಪಡೆದುಕೊಂಡಿತು.