ನ್ಯೂಸ್ ನಾಟೌಟ್: ಯೋಗಾಸನ ಸ್ಪೋರ್ಟ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆನ್ ಲೈನ್ ನಲ್ಲಿ ಆಯೋಜಿಸಲಾಗಿದ್ದ 15ನೇ ರಾಷ್ಟ್ರೀಯ ಮುಕ್ತ ಯೋಗಾಸನ ಕೂಟದಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳು ಪ್ರಚಂಡ ಸಾಧನೆ ಮೆರೆದಿದ್ದಾರೆ. 12 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಹವಿಕ್ಷಾ ಎಸ್ .ಆರ್ ಮತ್ತು ಜಿಶಾ ಕೆ.ಕೆ ತೃತೀಯ ಸ್ಥಾನ ಪಡೆದುಕೊಂಡರು. ಇದೇ ವಿಭಾಗದಲ್ಲಿ ಖುಷಿ ಕೊಪ್ಪತ್ತಡ್ಕ, ನಿಹಾನಿ ವಾಲ್ತಾಜೆ, ಶರಣ್ಯ ಹರಿಹರ ಪಾಲ್ಗೊಂಡಿದ್ದರು. ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಕರ ಬಹುಮಾನ ನೀಡಲಾಯಿತು. ಈ ಎಲ್ಲ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಗೌತಮ್ ಕಳಗಿ, ಡಾ.ರಾಜೇಶ್ವರಿ, ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ, ಪ್ರಶಾಂತ್ ವಾಲ್ತಾಜೆ, ರೋಹಿತಾಶ್ವ ಹರಿಹರ, ವಿನಯ್ ಮಾಡಬಾಕಿಲು ,ಸಾವಿತ್ರಿ ಹರಿಹರ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.
- +91 73497 60202
- [email protected]
- September 20, 2024 9:59 AM