ನ್ಯೂಸ್ ನಾಟೌಟ್: ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ.ಅದರಲ್ಲೂ ಕಾಡಾನೆಗಳು ತಮ್ಮ ಅಟ್ಟಹಾಸ ತೋರಿಸುತ್ತಿದ್ದು, ರೈತ ಬೆಳೆದ ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ.ಇತ್ತೀಚಿಗೆ ಸುಳ್ಯ ಭಾಗದ ಸಂಪಾಜೆ,ದೊಡ್ಡ ತೋಟ,ಅರಂತೋಡು,ಮಂಡೆಕೋಲು ಭಾಗದಲ್ಲಿಯೂ ಕಾಡಾನೆ ಪ್ರತ್ಯಕ್ಷಗೊಂಡು ಅಲ್ಲಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು.
ಇದೀಗ ಒಂಟಿಸಲಗವೊಂದು ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿದ್ದು,ಮಾ.24ರ ರಾತ್ರಿ ಪಂಜಿಕಲ್ಲು ರಸ್ತೆಯಲ್ಲಿ ಕಂಡುಬಂದಿದೆ.ಇದರಿಂದಾಗಿ ಆ ಭಾಗದ ಜನತೆ ಆತಂಕದಲ್ಲಿದ್ದು,ಶಾಲೆಗೆ ಹೋಗೋ ವಿದ್ಯಾರ್ಥಿಗಳು ಸೇರಿದಂತೆ , ನಿತ್ಯ ರಸ್ತೆಯಲ್ಲಿ ಓಡಾಡುವವರು ಭಯಭೀತರಾಗಿದ್ದಾರೆ.