ನ್ಯೂಸ್ ನಾಟೌಟ್: ಸಾಮಾನ್ಯವಾಗಿ ನಮ್ಮ ಮೊಬೈಲ್ ಗೆ ಲಿಂಕ್ ಗಳು ಬರುತ್ತಲೇ ಇರುತ್ತದೆ. ಕೆಲವು ಸಲ ಆ ಲಿಂಕ್ ಗಳು ಕೂಡ ನಮಗರಿಯದೇ ನಮಗೊಂದು ಶಾಕ್ ಕೊಡುವುದುಂಟು. ಅಂತಹುದೇ ಒಂದು ಪ್ರಕರಣ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ.
ಕಡಬ ಬಲ್ಯಗ್ರಾಮದ ನಿವಾಸಿ ರಾಜು ಹೊಸ್ಮಠ (49 ವರ್ಷ) ಎಂಬುವವರು ಎಂದಿನಂತೆ ತಮ್ಮ ಮೊಬೈಲ್ ತೆರೆದಾಗ ಅವರ ಖಾತೆಗೆ ಮೊಬೈಲ್ ಸಂಖ್ಯೆಯೊಂದರಿಂದ ಒಂದು ಫೇಸ್ ಬುಕ್ ಸಂದೇಶದ ಲಿಂಕ್ ಬಂದಿತ್ತು. ತಕ್ಷಣ ಅವರು ಅದನ್ನು ಪರಿಶೀಲಿಸಲು ಮುಂದಾದರು. ಲಿಂಕ್ ಓಪನ್ ಆದ ಕೂಡಲೇ ಅವರಿಗೆ ಒಂದು ಆಘಾತ ಕಾದಿತ್ತು. ಏಕೆಂದರೆ ಪ್ರವೀಣ್ ಮುದ್ದಡ್ಕ ಎಂಬಾತನು ತನ್ನ ಫೇಸ್ ಬುಕ್ ಖಾತೆಯಲ್ಲಿ ಜಾತಿ, ಜನಾಂಗ , ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿರುವುದು ಕಂಡು ಬಂದಿದೆ. ಈ ಬಗ್ಗೆ ಸ್ವತಃ ದ.ಕ ಜಿಲ್ಲೆಯ ಅಂಬೇಡ್ಕರ್ ಅಪತ್ಬಾಂಧವ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ರಾಜು ಹೊಸ್ಮಠ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಈ ಬಗ್ಗೆ ಅ.ಕ್ರ 27/2024 ಕಲಂ: 153(ಎ), 295(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.