ನ್ಯೂಸ್ ನಾಟೌಟ್: ಮಂಗಳೂರಿನ ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದಿಂದ (Pilikula Zoo) ಬೃಹತ್ ಕಾಳಿಂಗ ಸರ್ಪವೊಂದು (King Cobra) ತಪ್ಪಿಸಿಕೊಂಡಿರೋದ್ರ ಬಗ್ಗೆ ವರದಿಯಾಗಿದೆ.ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಬಂದ ಕಾಳಿಂಗ ಸರ್ಪವು ರಸ್ತೆ ದಾಟಿ ವಿಜ್ಞಾನ ಕೇಂದ್ರ ದತ್ತ ಸಾಗಿದೆ ಎಂದು ಹೇಳಲಾಗಿದೆ.
ಟಿಕೆಟ್ ಕೌಂಟರ್ ಬಳಿ ಬಂದ ಕಾಳಿಂಗ ಸರ್ಪವನ್ನು ಕಂಡೊಡನೆ ಸಿಬ್ಬಂದಿ ಹಾಗೂ ಪ್ರವಾಸಕ್ಕೆ ಬಂದಿದ್ದ ಜನರು ಹೌಹಾರಿದರು. ಅಧಿಕಾರಿಗಳ ನಿರ್ಲಕ್ಷದಿಂದಲೇ ಕಾಳಿಂಗ ಸರ್ಪ ತಪ್ಪಿಸಿಕೊಂಡಿದೆ ಎಂಬ ಆರೋಪಗಳಿವೆ. ಸದ್ಯ ಕಾಳಿಂಗ ಸರ್ಪ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಾಣಿಗಳ ವಂಶಾಭಿವೃದ್ಧಿಯಲ್ಲಿ ದೇಶದ 17 ಮೃಗಾಲಯಗಳಲ್ಲಿ ಪಿಲಿಕುಳ ಮೃಗಾಲಯವು ಮೊದಲ ಸ್ಥಾನದಲ್ಲಿದೆ. ಇತರ ಮೃಗಾಲಯಗಳಿಗೆ ಹೋಲಿಸಿದರೆ ಇಲ್ಲಿ ಹುಲಿ, ಚಿರತೆ, ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ. ಅದರಲ್ಲಿಯೂ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ಇಲ್ಲಿ ಮಾತ್ರ ಆಗುತ್ತಿದೆ. ಕಾಳಿಂಗ ಸರ್ಪವನ್ನು ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಮರಿಗಳಾಗಿದೆ. ಹೆಚ್ಚುವರಿ ಕಾಳಿಂಗ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಸಂತಾನಾಭಿವೃದ್ಧಿ ಹೆಚ್ಚಲು ಪಿಲಿಕುಳದಲ್ಲಿರುವ ವಾತವರಣ, ಆರೈಕೆ ಮುಖ್ಯವಾಗಿದೆ. ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತಾವರಣ ನಿರ್ಮಾಣ ಮಾಡಲಾಗಿದೆ.