ನ್ಯೂಸ್ ನಾಟೌಟ್: ರಾಜ್ಯದ ಹಲವು ಭಾಗಗಳಲ್ಲಿ ಚರ್ಚುಗಳು, ಮಠಗಳು, ಮದರಸಗಳು ಮತ್ತು ಎನ್ಜಿಒಗಳು ಸರಿಯಾಗಿ ನೊಂದಣಿಯಾಗದೆಯೇ ಕಾರ್ಯನಿರ್ವಹಿಸುತ್ತಿವೆ ಎಂಬ ದೂರುಗಳು ಆಯಾಯ ಜಿಲ್ಲಾಡಳಿತಗಳಿಗೆ ಬರುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಖಡಕ್ ಈ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ, ನೊಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್, ಮಠ, ಎನ್ಜಿಓಗಳಿಗೂ ನೋಂದಣಿಗೆ ಗಡುವು ನೀಡಲಾಗಿದೆ. ನೊಂದಣಿ ಆಗದಿದ್ದರೇ ಇವುಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿದ್ದಾರೆ. ನೊಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್ ಮಠ, ಎನ್ಜಿಓಗಳು ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಮುಂದಿನ ತಿಂಗಳ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು (NGO ) ಹಾಗೂ ಮಠಗಳು, ಮದರಸ ಹಾಗೂ ಚರ್ಚ್ಗಳಲ್ಲಿ ಮಕ್ಕಳನ್ನು ದಾಖಲಿಸಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೇ ನಡೆಸುತ್ತಿದ್ದರೆ ಹಾಗೂ ಹೊಸ ಮಕ್ಕಳ ಪಾಲನಾ ಸಂಸ್ಥೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರು ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ಕಲಂ 41 ರನ್ವಯ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.